

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್ಡಿಡಿ ವಿರುದ್ಧ ಪರಮೇಶ್ವರ್ ಸಂಚು ಮಾಡಿರುವ ಆರೋಪವಿದ್ದು, ಅವರ ಹೆಡೆಮುರಿ ಕಟ್ಟಲು ದೊಡ್ಡಗೌಡರು ರಣತಂತ್ರ ಹೂಡಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆ ಕೊರಟಗೆರೆ ಕ್ಷೇತ್ರದಲ್ಲಿ ನಡೆದ ಪ್ರಚಾರದಲ್ಲಿ ಪರೋಕ್ಷವಾಗಿ ಪರಮೇಶ್ವರ್ ಅವರನ್ನು ಸೋಲಿಸುವಂತೆ ಎಚ್.ಡಿ. ದೇವೇಗೌಡ ಅವರು ಕರೆ ಕೊಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪರಮೇಶ್ವರ್ ಗೆಲುವಿಗೆ ಎಚ್ಡಿಡಿ ಮುಳುವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಐವರು ಕೊರಿಯನ್ ಮಹಿಳೆಯರ ರೇಪ್: ಭಾರತ ಮೂಲದ ಧನಕರ್ ಫೋನ್ ನೋಡಿ ದಂಗಾದ ಸಿಡ್ನಿ ಪೊಲೀಸರು
ಕೊರಟಗೆರೆ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ಪರ ದೊಡ್ಡಗೌಡರು ಚುನಾವಣಾ ಪ್ರಚಾರ ನಡೆಸಿದ್ದು. ನಿನ್ನೆ ಕೊರಟಗೆರೆ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಪರಮೇಶ್ವರ್ ಸೋಲಿಸುವಂತೆ ಮತದಾರರಿಗೆ ಪರೋಕ್ಷವಾಗಿ ಕರೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕಳೆದ ಲೋಕಸಭಾ ಚುನಾವಣೆ ಸೋಲು ನೆನೆದು ಮಾಜಿ ಪ್ರಧಾನಿ ಎಚ್ಡಿಡಿ ಭಾವುಕರಾದರು. ನಾನು ಚುನಾವಣೆಗೆ ನಿಲ್ಲಲ್ಲ ಅಂದ್ರೂ ನಿಲ್ಲಿಸಿ ನನ್ನನ್ನು ಅವಮಾನಿಸಿದರು. ಆಗ ಅವಮಾನಿಸಿರುವ ನೋವು ನನ್ನನ್ನು ಈಗಲೂ ಕಾಡುತ್ತಿದೆ. ಈ ಸಾರಿ ನೀವು ಬಡ ಹುಡುಗ ಸುಧಾಕರ್ ಅವರನ್ನು ಗೆಲ್ಲಿಸಿ, ನನ್ನ ಕಣ್ಣೀರನ್ನು ಒರೆಸಿ ಎಂದು ಎಚ್ಡಿಡಿ ಕೇಳಿಕೊಂಡರು. ಇದನ್ನೂ ಓದಿ: ಮೈಸೂರಿನಲ್ಲಿ ಕಾವೇರಿದ ಚುನಾವಣಾ ಅಖಾಡ: ಮೂರೂ ಪಕ್ಷದ ಘಟಾನುಘಟಿ ನಾಯಕರಿಂದ ಇಂದು ಪ್ರಚಾರ
ಸುಧಾಕರ್ ಲಾಲ್ರನ್ನ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿ ಎನ್ನುವ ಮೂಲಕ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸೋಲಿಸಲು ಎಚ್ಡಿಡಿ ಕರೆ ನೀಡಿದ್ದಾರೆ. (ಏಜೆನ್ಸೀಸ್)