ಅಹಿಂದ ನಾಯಕನನ್ನು ಹಣಿಯಲು ಅಹಿಂದ ಅಸ್ತ್ರ ಹೂಡಿದ ಕುಮಾರಸ್ವಾಮಿ

Siddaramaiah HD Kumaraswamy
Published on

ಮೈಸೂರು: ಅಹಿಂದ ನಾಯಕ ಎಂದೇ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಣಿಯಲು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಅಹಿಂದ ಅಸ್ತ್ರವನ್ನೇ ಹೂಡಿದ್ದಾರೆ.

ವರುಣ ಕ್ಷೇತ್ರ ದಿನದಿಂದ ದಿನಕ್ಕೆ ಭರ್ಜರಿ ಕಾವು ಪಡೆದುಕೊಳ್ಳುತ್ತಿದೆ. ಬಿಜೆಪಿಯ ಪ್ರಭಾವಿ ನಾಯಕ ವಿ. ಸೋಮಣ್ಣ ಹಾಗೂ ಜೆಡಿಎಸ್​ನಿಂದ ಡಾ. ಭಾರತಿಶಂಕರ್​ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಣದಲ್ಲಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಜನಸಂಖ್ಯೆ ಕುರಿತು ವ್ಯಂಗ್ಯಚಿತ್ರ; ವ್ಯಾಪಕ ಖಂಡನೆ

ಅಹಿಂದ ಸಮಾವೇಶ

ಸಿದ್ದು ಅಣಿಯಲು ವರುಣ ಅಖಾಡಕ್ಕೆ ಧುಮುಕಿರುವ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ, ಜೆಡಿಎಸ್‌ ಅಭ್ಯರ್ಥಿ ಪರ ವರುಣದಲ್ಲಿ ಪ್ರಚಾರ ಮಾಡಲಿದ್ದಾರೆ. ಅಹಿಂದಾ ಸಮಾವೇಶದ ಹೆಸರಿನಲ್ಲಿ ಸಂಜೆ 4 ಗಂಟೆಗೆ ವರುಣ ಕ್ಷೇತ್ರದ ಪ್ರಚಾರ ಸಭೆ ಕರೆದಿದ್ದಾರೆ. ಟಿ.ನರಸೀಪುರದ ತ್ರಿವೇಣಿ ಸಂಗಮ‌ ಸ್ಥಳದಲ್ಲಿ ಸಭೆ ನಡೆಯಲಿದೆ.

ಈ ಬಾರಿ ಸಿದ್ದು ಅಣಿಯಲು ಕುಮಾರಸ್ವಾಮಿ ಅವರು ದಲಿತ ಅಸ್ತ್ರ ಬಿಟ್ಟಿದ್ದಾರೆ. ಇದು ಯಾವ ರೀತಿ ಫಲ ಕೊಡುತ್ತದೆ ಎಂಬುದನ್ನು ಚುನಾವಣಾ ಫಲಿತಾಂಶ ಬಂದಾಗಲೇ ತಿಳಿಯುತ್ತದೆ. ಮೈಸೂರು ನಗರದ ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರದಲ್ಲಿಯೂ ಎಚ್​ಡಿಕೆ ಪ್ರಚಾರ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ಭಾರತ ಮೂಲದ ವ್ಯಕ್ತಿ ಬಂಧನ

ನಿರಂತರ ಪ್ರಚಾರದಿಂದ ತೀವ್ರವಾಗಿ ದಣಿದಿದ್ದ ಎಚ್​.ಡಿ. ಕುಮಾರಸ್ವಾಮಿ ಅವರು ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡ್ಮೂರು ದಿನ ವಿಶ್ರಾಂತಿ ಪಡೆದು, ಇಂದು ಮತ್ತೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net