ಮತದಾರರಿಗೆ ಹತ್ತಿರವಾಗುತ್ತಿರುವ ಸಪ್ತಗಿರಿಗೌಡ: ಗಾಂಧಿನಗರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ, ಜನರಿಂದ ಜಯಘೋಷ

Sapthagiri Gowda
Published on

ಬೆಂಗಳೂರು: ದಿನದಿಂದ ದಿನಕ್ಕೆ ಮತದಾರರಿಗೆ ಹತ್ತಿರವಾಗುತ್ತಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ, ಸೋಮವಾರ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದರು.

ಬೆಳಗ್ಗೆ ಕುಮಾರಪಾರ್ಕ್, ಶೇಷಾದ್ರಿಪುರ ಮತ್ತಿತರ ಕಡೆ ವಾಯುವಿಹಾರಕ್ಕೆ ಬಂದಿದ್ದ, ಹಿರಿಯ ನಾಗರಿಕರು, ಯುವಕರು, ವಿದ್ಯಾರ್ಥಿಗಳು ಸೇರಿ ಹಲವರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು. ಈ ವೇಳೆ ಅನೇಕ ಹಿರಿಯರಿಂದ ಆಶೀರ್ವಾದ ಪಡೆದುಕೊಂಡ ಸಪ್ತಗಿರಿಗೌಡ, ಕ್ಷೇತ್ರದಲ್ಲಿ ಎದುರಾಗಿರುವ ಕೊಂದು ಕೊರತೆಗಳನ್ನು ಆಲಿಸಿದರು.

ನಂತರ ಓಕಾಳಿಪುರಂ, ರಾಮಚಂದ್ರಾಪುರ ಸೇರಿ ಮತ್ತಿತರ ವಾರ್ಡ್​ಗಳಲ್ಲಿ ಪಕ್ಷದ ಪ್ರಮುಖರ ಜತೆ ಮನೆ ಮನೆಗೆ ತೆರಳಿ ಮತಯಾಚಿಸಿದರು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಜನ ಸೇವೆಯೇ ಜನಾರ್ದನ ಸೇವೆ ಎಂದು ನಂಬಿಕೊಂಡಿರುವ ತಮಗೆ ಇದೊಂದು ಬಾರಿ ಅವಕಾಶ ನೀಡಬೇಕು ಎಂದು ವಿನಮ್ರವಾಗಿ ಮನವಿ ಮಾಡಿದರು.

ಮಾಜಿ ಬಿಬಿಎಂಪಿ ಸದಸ್ಯ ಶಿವಪ್ರಕಾಶ್, ವಾರ್ಡ್ ಅಧ್ಯಕ್ಷ ಮುರುಗನ್, ಮುಖಂಡರಾದ ಅನಂತು, ಕುಮಾರ್ ಸೇರಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಭಾಗವಹಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿದ ಅವರು, ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಎಷ್ಟು ಅಗತ್ಯವಿದೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟರು. ಸಪ್ತಗಿರಿಗೌಡ ಹೋದ ಕಡೆಯಲ್ಲೆಲ್ಲ ಯುವಕರು ಗೆದ್ದು ವಿಧಾನಸಭೆಗೆ ಆಯ್ಕೆಯಾದರೆ ಕ್ಷೇತ್ರಕ್ಕೂ ಹೆಮ್ಮೆ, ನಮಗೂ ಹೆಮ್ಮೆ. ಜನತೆಯ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ನಿಮ್ಮಂತಹವರು ಕಣ್ಣಕ್ಕಿಳಿದಿರುವುದೇ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು. ಶೇಷಾದ್ರಿಪುರ, ಕುಮಾರಪಾರ್ಕ್ ಮತ್ತಿತರ ಕಡೆ ಯುವತಿಯರು ಆರತಿ ಎತ್ತಿ ಸ್ವಾಗತ ಕೋರಿದರು. ಹಷೋದ್ಘಾರ ಜೈಕಾರಗಳನ್ನು ಕೂಗಿ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಪರವಾಗಿ ಜೈಕಾರದ ಘೊಷಣೆ ಮೊಳಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net