

ಚಿಕ್ಕಮಗಳೂರು: ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಆಡಳಿತ ಮಂಡಳಿಯ 24 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಹಾಸಭಾ ನಿಕಟಪೂರ್ವ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಅವರ ಬಣ ಸತತ ಮೂರನೇ ಬಾರಿ ಜಯಭೇರಿ ಬಾರಿಸಿದೆ. ಬಣದ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಟ್ಟು 24 ಸ್ಥಾನಗಳ ಪೈಕಿ 16 ಸ್ಥಾನಗಳು ಸಾಮಾನ್ಯ ಸ್ಥಾನಗಳಾಗಿದ್ದರೆ, ಉಳಿದ 8 ಮಹಿಳೆಯರಿಗೆ ಮೀಸಲಾಗಿದ್ದವು.
ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ ಪಿ.ಮಂಜುನಾಥ ಜೋಷಿ (822 ಮತಗಳು), ಎನ್.ಕೆ.ಅಶ್ವಿನ್ (793), ಎ.ವಿ.ಅನಂತರಾಮಯ್ಯ (766), ಎ.ಎನ್.ಗೋಪಾಲಕೃಷ್ಣ (750), ಬಾಟಾ ನಾಗೇಂದ್ರ (761), ಎಸ್.ಕೆ.ಕೃಷ್ಣ (724), ಕೆ.ಯು.ವಿನೀತ್‌ಕುಮಾರ್ (698), ಅನಿಲ್ ವಿ. ಕಶ್ಯಪ್ (679), ಜಿ.ಎಂ.ಸತ್ಯನಾರಾಯಣಸ್ವಾಮಿ (677), ಸಿ.ಪ್ರಕಾಶ್ (672), ಸುಬ್ರಹ್ಮಣ್ಯ (671), ಕೆ.ಎ.ಗೋಪಿನಾಥ್ (669), ಎಂ.ಪಿ.ಉಡುಪ (666), ಎ.ವಿ.ಮಾಧವರಾವ್ (648), ಎಂ.ಎನ್.ರಂಗನಾಥನ್ (623), ಪ್ರಕಾಶ್ ಎಚ್.ಎನ್. (622) ಗೆಲುವಿನ ನಗೆ ಬೀರಿದ್ದಾರೆ.
ಮಹಿಳಾ ಮೀಸಲು ಸ್ಥಾನದಿಂದ ಕಣಕ್ಕಿಳಿದಿದ್ದ ಜಯಶ್ರೀ ಜೋಷಿ (764), ಎಸ್.ಶಾಂತಕುಮಾರಿ (708), ಶ್ರೀಲಕ್ಷ್ಮೀ ಶಿವರಾಮ್ (676), ಎಂ.ಎಸ್.ಚೈತ್ರಾ (663), ಕೆ.ಕೆ.ತಾರಾಮಣಿ (661), ಸುಮಾರಾಣಿ (657), ಶಶಿಕಲಾ ಶಿವಶಂಕರ್ (653) ಹಾಗೂ ಶ್ಯಾಮಲಾ ಎಂ.ರಾವ್ (649) ಜಯಗಳಿಸಿದ್ದಾರೆ.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಜಾಂಚಿ ಬಸವನಹಳ್ಳಿಯ ಬಿ.ಸಿ.ಜಯರಾಮ್ ಹಾಗೂ ಹಿರೇಮಗಳೂರಿನ ರಮಾ ಪ್ರಸಾದ್ ಹಾಗೂ ಮಳಲೂರಿನ ಟಿ.ಭುಜಂಗರಾವ್ ಸೋತವರಲ್ಲಿ ಪ್ರಮುಖರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ರಾಮಮೂರ್ತಿ ಪರಾಭವಗೊಂಡಿದ್ದಾರೆ.
ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ಶಾಂತಿಯುತವಾಗಿ ಮತದಾನ ನಡೆಯಿತು. ಆನಂತರ ನಡೆದ ಮತ ಎಣಿಕೆ ಬಳಿಕ ರಾತ್ರಿ 10 ಗಂಟೆಗೆ ಚುನಾವಣಾಧಿಕಾರಿ ತರೀಕೆರೆಯ ಸಹಕಾರ ಸಂಘಗಳ ಸಹಾಯಕಿ ನಿಬಂಧಕಿ ಅನುಷಾ ಫಲಿತಾಂಶ ಪ್ರಕಟಿಸಿದರು.