

ಬೆಂಗಳೂರು: ಜನಪ್ರಿಯ ಕಾರ್ಯಕ್ರಮವಾಗಿದ್ದ ಹಾಸ್ಯ ದರ್ಬಾರ್ ಕಾರ್ಯಕ್ರಮ ವೀಕ್ಷಕರ ಒತ್ತಾಯದ ಮೇರೆಗೆ ಹೊಸ ರೂಪದಲ್ಲಿ ಹೊಸ ಸೀಸನ್ ಶುರುವಾಗುತ್ತಿದೆ.
ಹಾಸ್ಯ ದರ್ಬಾರ್ ಸೀಸನ್ 2 ಕಾರ್ಯಕ್ರಮದಲ್ಲಿ, ಹಾಸ್ಯ ದಿಗ್ಗಜರಾದ ಪ್ರಾಣೇಶ್, ಪ್ರೊಫೆಸರ್ ಕೃಷ್ಣೇಗೌಡ, ಸುಧಾಬರಗೂರು, ರಿಚರ್ಡ್ ಲೂಯಿಸ್, ಮುಖ್ಯಮಂತ್ರಿ ಚಂದ್ರು, ಎಮ್ ಎಸ್ ನರಸಿಂಹಮೂರ್ತಿ , ಗುಂಡೂರಾವ್, ಮಿಮಿಕ್ರಿ ದಯಾನಂದ್ ಭಾಗವಹಿಸಲಿದ್ದು ಹಿರೇಮಗಳೂರು ಕಣ್ಣನ್ ನಡೆಸಿಕೊಡಲಿದ್ದಾರೆ. ಹಾಸ್ಯದರ್ಬಾರ್ ಸೀಸನ್ 2 ವಿಭಿನ್ನ ರೀತಿಯಲ್ಲಿ ಅದ್ದೂರಿ ಸೆಟ್ ನಲ್ಲಿ ಇದೇ ಆಗಸ್ಟ್ 28ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8 ರಿಂದ 9 ಗಂಟೆಯ ವರೆಗೆ ಸಿರಿಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.
ಪುಟಾಣಿ ಮಕ್ಕಳ ಪವರ್ ಫುಲ್ ಎಂಟರ್ಟೈನ್ಮೆಂಟ್ ಶೋ ಲಿಟಲ್ ಕಿಲಾಡೀಸ್ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಮೂಡಿ ಬರಲಿದೆ. ಇದರೊಂದಿಗೆ ಎಂದಿನಂತೆ ದೈನಂದಿನ ಧಾರಾವಾಹಿಗಳು ವಿಭಿನ್ನ ಕಾರ್ಯಕ್ರಮಗಳು ಜನಪ್ರಿಯ ಚಲನಚಿತ್ರಗಳು ಸಿರಿಕನ್ನಡದ ಕಿರುಪರದೆಯನ್ನು ಅಲಂಕರಿಸಲಿದ್ದು ಎಂದಿನಂತೆ ವೀಕ್ಷಕರ ಪ್ರೋತ್ಸಾಹ ವಾಹಿನಿಗೆ ಇರಲಿ ಎಂದು ಸಿರಿಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ ಹಾಗೂ ರಾಜೇಶ್ ರಾಜಘಟ್ಟ ಮನವಿ ಮಾಡಿಕೊಂಡಿದ್ದಾರೆ.
ಸಿರಿ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಶೋಗಳು ಶುರುವಾಗುತ್ತಿದ್ದು ಜೊತೆಗೆ ವಾಹಿನಿಯನ್ನು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ನೋಡುವ ವೀಕ್ಷಕರಿಗೆ ಚಿನ್ನ ಬೆಳ್ಳಿ ಗೆಲ್ಲುವ ಸುವರ್ಣಾವಕಾಶ.