ಪ್ರಿಯಕರನ ಕಬ್ಬಿನ ಗದ್ದೆಯಲ್ಲಿ ಯುವತಿ ಶವ! ಗಂಡನನ್ನು ಬಿಟ್ಟು ಬಂದವಳು ದುರಂತ ಸಾವು, ಹಾಸನದಲ್ಲಿ ಘಟನೆ

Love Case
Published on

ಹಾಸನ: ಯುವತಿಯೊಬ್ಬಳ ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ಕೊಲೆ ಮಾಡಿ ಹೂತು ಹಾಕಿದ್ದಾನೆ ಎಂದು ಮೃತಳ ಪಾಲಕರು ಆರೋಪ ಮಾಡಿದ್ದಾರೆ.

ಕಾವ್ಯ (25) ಮೃತಪಟ್ಟ ಯುವತಿ. ಈ ಘಟನೆ ಹೊಳೆನರಸೀಪುರ ತಾಲ್ಲೂಕಿನ ಪಾರಸನಹಳ್ಳಿಯಲ್ಲಿ ನಡೆದಿದೆ. ಕಾವ್ಯ ಪ್ರಿಯಕರ ಅವಿನಾಶ್ ವಿರುದ್ಧ ಆಕೆಯ ಪಾಲಕರು ಕೊಲೆ ಆರೋಪ ಮಾಡಿದ್ದು, ಪ್ರಕರಣ ದಾಖಲಾಗಿದೆ. ಇದೀಗ ತಹಸಿಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಪ್ರಿಯಕರನ ಎದರೇ ಕಾವ್ಯಾಳ ಶವವನ್ನು ಪೊಲೀಸರು ಹೊರಗೆ ತೆಗೆಸಿದ್ದಾರೆ.

ಬಿಬಿಎಂ ಓದಿದ್ದ ಕಾವ್ಯ ಓರ್ವ ವ್ಯಕ್ತಿಯನ್ನು ಪ್ರೀತಿಸಿ ಮೊದಲ ವಿವಾಹ ಆಗಿದ್ದಳು. ಆದರೆ, ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಗಂಡನನ್ನು ಬಿಟ್ಟು ಬಂದಿದ್ದಳು. ಇದಾದ ಬಳಿಕ ಪಾರಸನಹಳ್ಳಿಯ ಅವಿನಾಶ್‌ನನ್ನು ಪ್ರೀತಿಸಿ ಆತನ ಮನೆಯಲ್ಲಿದ್ದಳು. ಆದರೆ, ಕಳೆದ ಹದಿನೈದು ದಿನಗಳಿಂದ ಕಾವ್ಯಾ ನಾಪತ್ತೆಯಾಗಿದ್ದು, ಆಕೆಯ ಪಾಲಕರು ದೂರು ನೀಡಿದ್ದರು. ಪೊಲೀಸರ ತನಿಖೆಯ ಬಳಿಕೆ ಆಕೆಯ ಶವ ಅವಿನಾಶ್​ಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.

ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಅದನ್ನು ಹೊರತೆಗೆಯಲಾಗಿದೆ. ಅವಿನಾಶ್​ ಕೊಲೆ ಮಾಡಿ ಹೂತಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net