

ಚನ್ನರಾಯಪಟ್ಟಣ: ಪ್ರಿಯಕರನ ಜತೆ ಓಡಿ ಹೋಗುವ ಕುರಿತು ಗಾಢ ಚಿಂತನೆಯಲ್ಲಿದ್ದಾಗ ಜೋರಾಗಿ ಅಳುತ್ತಿತ್ತು ಎಂಬ ಕಾರಣಕ್ಕೆ ಎರಡು ವರ್ಷದ ಕಂದನನ್ನೇ ಪಾಪಿ ತಾಯಿ ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾಳೆ.
ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಸುಮಾ ತನ್ನ ಎರಡು ವರ್ಷದ ಪುತ್ರ ತನ್ಮಯ್‌ನನ್ನು ಕೊಂದಿದ್ದಾಳೆ.
ಜ. 19 ರಂದು ಘಟನೆ ನಡೆದಿದ್ದು ಮಗು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಪತಿ ನಂಜಪ್ಪ ಮರಣೋತ್ತರ ಪರೀಕ್ಷೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಮಗುವಿನ ತಲೆಗೆ ಬಲವಾದ ಏಟು ಬಿದ್ದಿದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಮದುವೆಗೂ ಮೊದಲು ಪ್ರೀತಿಸುತ್ತಿದ್ದ ತುರುವೇಕೆರೆ ತಾಲೂಕು ಹರಿದಾಸನಹಳ್ಳಿಯ ಮನೋಹರ ಎಂಬಾತನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ನಮ್ಮಿಬ್ಬರ ವಿಚಾರ ಗಂಡನಿಗೆ ಗೊತ್ತಾಗಿ ಜಗಳವಾಗಿತ್ತು. ಗಂಡನೊಂದಿಗೆ ಸಂಸಾರ ನಡೆಸಲು ಇಷ್ಟವಿಲ್ಲದ್ದರಿಂದ ಮನೋಹರನ ಬಳಿ ಹೋಗುವ ಸಲುವಾಗಿ ಯೋಚನೆ ಮಾಡುತ್ತಾ ಕುಳಿತಿದ್ದೆ. ಆಗ ಮಗು ಜೋರಾಗಿ ಅಳಲು ಶುರು ಮಾಡಿತು.
ಸಿಟ್ಟು ತಾಳಲಾರದೆ ಮೂಗು ಹಾಗೂ ಬಾಯಿ ಮುಚ್ಚಿ 2 ರಿಂದ 3 ಬಾರಿ ಗೋಡೆಗೆ ಗುದ್ದಿ ಕೊಲೆ ಮಾಡಿದೆ ಎಂದು ಸುಮಾ ಬಾಯ್ಬಿಟ್ಟಿದ್ದಾಳೆ.