ಏಕಾಂತದಲ್ಲಿದ್ದಾಗ ಮನೆಗೆ ನುಗ್ಗಿ ವಿಡಿಯೋ ಮಾಡಿಕೊಂಡ! ಸೆಕ್ಸ್​ಗೆ ಒಪ್ಪದಿದ್ದರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ

mu 2
Published on

ಮೈಸೂರು: ವಿಧವೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನೊಬ್ಬ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬನ್ನೂರು ಪಟ್ಟಣದ ಭೋವಿ ಕಾಲೋನಿಯಲ್ಲಿ ನಡೆದಿದೆ. ವಿಧವೆಯೊಂದಿಗೆ ಏಕಾಂತದಲ್ಲಿದ್ದಾಗ ಬೇರೊಬ್ಬ ವ್ಯಕ್ತಿ ಅದನ್ನು ಚಿತ್ರೀಕರಿಸಿ ಬ್ಲ್ಯಾಕ್​ ಮೇಲ್ ಮಾಡಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಸ್ವಾಮಿ ಹೆಸರಿನ ಯುವಕ ವಿಧವೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಅದೇ ಊರಿನ ಮುಕುಂದನಿಗೆ ತಿಳಿದಿತ್ತು. ಜ.16ರಂದು ರಾತ್ರಿ ಸ್ವಾಮಿ ವಿಧವೆ ಮನೆಗೆ ಹೋಗುವುದನ್ನು ಗಮನಿಸಿದ್ದ. ಅವರಿಬ್ಬರು ಏಕಾಂತದಲ್ಲಿದ್ದಾಗ ಮನೆಗೆ ನುಗ್ಗಿದ ಮೋಹನ್​, ಜೋಡಿಯನ್ನು ನಗ್ನಗೊಳಿಸಿ ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ನನ್ನ ಜತೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಸ್ವಾಮಿ
ಸ್ವಾಮಿ
ಮೋಹನ್​
ಮೋಹನ್​

ಘಟನೆಯಿಂದಾಗಿ ಮನನೊಂದಿದ್ದ ಸ್ವಾಮಿ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಕುಟುಂಬ ಅಂತ್ಯಸಂಸ್ಕಾರ ಮಾಡಿ ಸುಮ್ಮನಾಗಿತ್ತು. ಆದರೆ ಇದೀಗ ಆತನೊಂದಿಗೆ ಸಂಬಂಧದಲ್ಲಿದ್ದ ವಿಧವೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ನಡೆದ ಘಟನೆಯನ್ನು ವಿವರಿಸಿದ್ದು, ಅದೇ ಕಾರಣಕ್ಕೆ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾಳೆ. ತಮ್ಮನ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಸ್ವಾಮಿಯ ಸಹೋದರ ಬಾಬು ದೂರು ದಾಖಲಿಸಿದ್ದಾರೆ. ಬನ್ನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net