Haryana Assembly Election| ಕಾಂಗ್ರೆಸ್​ ಪರ ವಾತಾವರಣ ನಿರ್ಮಿಸಿದರು ಸೋಲುಂಡಿದ್ದಾರೆ; ರೈತ ನಾಯಕನ ಹೇಳಿಕೆ ವೈರಲ್​

Gurnam Singh Charuni
Published on

ಕುರುಕ್ಷೇತ್ರ: ಈಚೆಗೆ ಮುಕ್ತಾಯಗೊಂಡ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ (Haryana Assembly Election) ಕಾಂಗ್ರೆಸ್​ ಪಕ್ಷವು (Congress Party) ಆಘಾತಕಾರಿ ಸೋಲು ಕಂಡಿದ್ದು, ಇಂಡಿಯಾ ಮೈತ್ರಿಕೂಟದ (INDIA Alliance) ಕೆಂಗಣ್ಣಿಗೆ ಗುರಿಯಾಗಿದೆ. ಎಕ್ಸಿಟ್​ ಪೋಲ್​ (Exit Poll) ಪ್ರಕಾರ ಕಾಂಗ್ರೆಸ್​ ಪ್ರಚಂಡ ದಿಗ್ವಿಜಯ ಸಾಧಿಸುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಮತ ಎಣಿಕೆಯ ಆರಂಭದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ (Congress) ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಹಿನ್ನಡೆ ಅನುಭವಿಸಿ 37 ಸ್ಥಾನಗಳಿಗೆ ತೃಪ್ತಿಪಟ್ಟಿಕೊಂಡಿತ್ತು.

ಚುನಾವಣೆಯಲ್ಲಿ (Election) ಕಾಂಗ್ರೆಸ್​ನ (Congress) ಕಾರ್ಯವೈಖರಿ ಬಗ್ಗೆ ಇಂಡಿಯಾ ಮೈತ್ರಿಕೂಟದ (Indian Alliance) ನಾಯಕರು ಅತೃಪ್ತಿ ಹೊರಹಾಕುತ್ತಿದ್ದು, ಅತಿಯಾದ ಆತ್ಮವಿಶ್ವಾಸ ಹಾಗೂ ಪ್ರಾದೇಶಿಕ ಪಕ್ಷಗಳ ಕಡೆಗಣನೆಯೇ ಸೋಲಿಗೆ ಪ್ರಮುಖ ಕಾರಣ ಎಂದು ಮುಗಿಬಿದ್ದಿದ್ಧಾರೆ. ಇದೀಗ ಭಾರತೀಯ ಕಿಸಾನ್ ಯೂನಿಯನ್ (BKU) ಅಧ್ಯಕ್ಷ ಗುರ್ನಾಮ್ ಸಿಂಗ್ ಚರಣಿ (Gurnam Singh Charuni)ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ (National Politics) ಹೊಸ ಸಂಚಲನವನ್ನೇ ಸೃಷ್ಟಿಸಿದ್ದು, ರೈತರ ಪ್ರತಿಭಟನೆಗೆ (Farmers Protest) ಕಾಂಗ್ರೆಸ್​ ಕುಮ್ಮಕ್ಕು ನೀಡಿತ್ತಾ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.

ಈ ಕುರಿತು ಮಾತನಾಡಿರುವ ಭಾರತೀಯ ಕಿಸಾನ್ ಯೂನಿಯನ್ (BKU) ಅಧ್ಯಕ್ಷ ಗುರ್ನಾಮ್ ಸಿಂಗ್ ಚರಣಿ (Gurnam Singh Charuni), ನನ್ನ ಪ್ರಕಾರ ಮಾಜಿ ಸಿಎಂ ಭೂಪಿಂದರ್​ ಹೂಡಾ (Bhupinder Hooda) ಒಬ್ಬ ಮೂರ್ಖ ಎಂದು ಭಾವಿಸುತ್ತೇನೆ. ನಾವು ವರ್ಷಾನುಗಟ್ಟಲೇ ಪ್ರತಿಭಟನೆ ನಡೆಸಿ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ (Haryana Assembly Election) ಕಾಂಗ್ರೆಸ್​ ಪರ ವಾತಾವರಣವನ್ನು ಸೃಷ್ಟಿ ಮಾಡಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್​ ಸೋಲಿಗೆ ಅತಿದೊಡ್ಡ ಕಾರಣವೇನೆಂದರೆ ಅದು ಭೂಪಿಂದರ್​ ಹೂಡಾ ಎಂದು ನಾನು ಹೇಳುತ್ತೇನೆ.

ಏಕೆಂದರೆ ಹರಿಯಾಣದಲ್ಲಿ ಕಾಂಗ್ರೆಸ್​ ಪಕ್ಷವು (Congress Party) ಬೇರೆ ಸಣ್ಣ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಕಳೆದ 10 ವರ್ಷಗಳಿಂದ ಹೂಡಾರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿರುವುದೇ ಚುನಾವಣೆಯಲ್ಲಿ ಸೋಲಿಗೆ ಪ್ರಮುಖ ಕಾರಣ. ಈ ಹಿಂದೆ ನಾನು ಭೂಪಿಂದರ್​ ಕಾಂಗ್ರೆಸ್​ (Congress) ನಾಶ ಮಾಡುವುದು ಪಕ್ಕಾ ಎಂದು ಹೇಳಿದ್ದೆ. ಅದು ಈಗ ನಿಜವಾಗುತ್ತಿದೆ. ಇದಲ್ಲದೆ ಕಳೆದ ಲೋಕಸಭೆ ಚುನಾವಣೆ (Loksabha Election) ಸಮಯದಲ್ಲಿ ನಮಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು, ಆದರೆ ನಂತರ ಭೂಪಿಂದರ್​ ಸಿಂಗ್ ನಿರಾಕರಿಸಿದರು. ಹೊಂದಾಣಿಕೆ ಮಾಡಿಕೊಂಡು ಟಿಕೆಟ್ ನೀಡಿದ್ದರೆ ಹರಿಯಾಣದಲ್ಲಿ (Haryana) ಅವರ ಪಕ್ಷ 9 ಸ್ಥಾನ ಗೆಲ್ಲಬಹುದಿತ್ತು.

ಕಳೆದ 10 ವರ್ಷಗಳಲ್ಲಿ ಹರಿಯಾಣದಲ್ಲಿ (Haryana) ಭೂಪೇಂದ್ರ ಸಿಂಗ್ ಅವರು ಪ್ರತಿಪಕ್ಷದ ನಾಯಕನ ಪಾತ್ರವನ್ನು ನಿರ್ವಹಿಸಲಿಲ್ಲ, ಆದರೆ ಕಿಸಾನ್ ಯೂನಿಯನ್ (Kisan Union) ಈ ಪಾತ್ರವನ್ನು ವಹಿಸಿದೆ ಎಂದು ಅವರು ಹೇಳಿದರು. ಇದೇ ವೇಳೆ ರೈತರ ಆಂದೋಲನದ ಬಗ್ಗೆ ಹೇಳುವುದಾದರೆ ಅದು ಕೈ ತಪ್ಪಿದೆ. ಈಗ ನನ್ನ ಸಿದ್ಧಾಂತ ಏನೆಂದರೆ ನಾವು ಸಂಸತ್ತಿಗೆ ಅಥವಾ ಅಸೆಂಬ್ಲಿಗೆ ತಲುಪಬೇಕು, ಇದರಿಂದ ನಾವು ಧ್ವನಿ ಎತ್ತಬಹುದು. ಇಂದು ಅನೇಕ ರೈತ ಮುಖಂಡರು ಬಿಜೆಪಿ ಜೊತೆ ನಿಂತಿದ್ದಾರೆ. ಇದು ಕಾಂಗ್ರೆಸ್​ ಸೋಲಿಗೆ ಕಾರಣವಾಯ್ತು ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ಅಧ್ಯಕ್ಷ ಗುರ್ನಾಮ್ ಸಿಂಗ್ ಚರಣಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net