ಮುಂಬೈ: 18ನೇ ಐಪಿಎಲ್ (IPL) ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ತಯಾರಿಗಳು ಭರದಿಂದ ಸಾಗಿದೆ. ಈಗಾಗಲೇ ರಿಟೇನ್ಗೆ (Retain) ಸಂಬಂಧಿಸಿದಂತೆ ನಿಯಮಗಳನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ವರ್ಷಾಂತ್ಯದಲ್ಲಿ ಮೆಗಾ ಹರಾಜು (Mega Auction) ನಡೆಯಲಿದೆ. ಈಗಾಗಲೇ ಮುಂದಿನ ಆವೃತ್ತಿಗೆ ತಂಡಗಳು ತಯಾರಿ ನಡೆಸುತ್ತಿದ್ದು, ಮುಂಬೈ ಇಂಡಿಯನ್ಸ್ (Mumbai Indians) ಒಂದು ಹೆಜ್ಜೆ ಮುಂದಿದೆ ಎಂದರೆ ತಪ್ಪಾಗಲಾರದು.
17ನೇ ಆವೃತ್ತಿಯಲ್ಲಿ ನಾಯಕತ್ವದ (Captaincy) ವಿಚಾರವಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಈ ಬಾರಿಯಾದರೂ ಭರ್ಜರಿ ಕಮ್ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದೆ. ಅದಕ್ಕೆ ಮುನ್ನುಡಿ ಎಂಬಂತೆ ಇದೀಗ ತಂಡಕ್ಕೆ ನೂತನ ಕೋಚ್ಅನ್ನು (Coach) ನೇಮಿಸುವ ಮೂಲಕ ಎದುರಾಳಿಗಳಿಗೆ ಸಂದೇಶ ರವಾನಿಸಿದೆ.
𝟙𝟟, 𝟭𝟴, 𝟙𝟡, 𝟚𝟘, 𝟮𝟭, 𝟮𝟮 & 𝗔𝗚𝗔𝗜𝗡!
— Mumbai Indians (@mipaltan) October 13, 2024
Welcome back, 𝗛𝗲𝗮𝗱 𝗖𝗼𝗮𝗰𝗵 𝗠𝗮𝗵𝗲𝗹𝗮 𝗝𝗮𝘆𝗮𝘄𝗮𝗿𝗱𝗲𝗻𝗲 💙#MumbaiMeriJaan #MumbaiIndians | @MahelaJay pic.twitter.com/c1OvP9OZSZ
ಇದನ್ನೂ ಓದಿ: ಮೆಗಾ ಹರಾಜಿಗೂ ಮುನ್ನ DC ತೊರೆಯುತ್ತಾರಾ Rishabh Pant? ಸ್ಟಾರ್ ಆಟಗಾನ ಪೋಸ್ಟ್ ವೈರಲ್
ಮುಂಬೈ ಇಂಡಿಯನ್ಸ್ (Mumbai Indians) ತಂಡದ ನೂತನ ಕೋಚ್ ಆಗಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ (Mahela Jayawardhane) ಅವರನ್ನು ನೇಮಿಸಲಾಗಿದ್ದು, ಮಾರ್ಕ್ ಬೌಚರ್ ಅವರನ್ನು ಫ್ರಾಂಚೈಸಿ ಕೋಚ್ ಹುದ್ದೆಯಿಂದ ತೆಗೆದುಹಾಕಿದೆ. 2017ರಿಂದ 22ರವೆರಗೂ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಜಯವರ್ಧನೆ ಟೀಮ್ಅನ್ನು ಮೂರು ಬಾರಿ ಚಾಂಪಿಯನ್ ಪಟ್ಟಕೇರಿಸಿದ್ದರು. 2023ರಲ್ಲಿ ಮಾರ್ಕ್ ಬೌಚರ್ ತಂಡದ ಕೋಚ್ ಆದ ನಂತರ ಒಮ್ಮೆ ಪ್ಲೇಆಫ್ ಪ್ರವೇಶಿಸಿದ್ದು ಬಿಟ್ಟರೆ ಗಮನಾರ್ಹ ಸಾಧನೆ ಮಾಡಿಲ್ಲ.
ಪ್ರತಿಯೊಂದು ತಂಡಗಳು ಒಂದು ಸೆಟ್ ಕೋಚಿಂಗ್ ಸಿಬ್ಬಂದಿಯನ್ನು ಹೊಂದಿದ್ದು, ಅವರು MI ಕುಟುಂಬದಲ್ಲಿ ಅನೇಕ ತಂಡಗಳಿಗೆ ತರಬೇತುದಾರರಾಗಿ MI OneFamily ಆಡಿದ ಕ್ರಿಕೆಟ್ ಅನ್ನು ಉನ್ನತೀಕರಿಸುವ ನೀತಿ, ಆಟದ ಶೈಲಿ ಮತ್ತು ನಿರ್ಧಾರಗಳನ್ನು ಪ್ರತಿಬಿಂಬಿಸುತ್ತದೆ, ಮಹೇಲಾ ಅವರ ಪಾತ್ರವು ಈಗ ಮತ್ತೊಮ್ಮೆ ವಿಕಸನಗೊಂಡಿದೆ ಎಂದು ಮುಂಬೈ ಇಂಡಿಯನ್ಸ್ (Mumbai Indians) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.