

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ (IPL) ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ಈಗಾಗಲೇ ರಿಟೇನ್ಗೆ (Retain) ಸಂಬಂಧಿಸಿದ ನಿಯಮಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ತಿಂಗಳಾಂತ್ಯಕ್ಕೆ ಫ್ರಾಂಚೈಸಿಗಳು (Franchise) ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇದಾದ ಬಳಿಕ ವರ್ಷಾಂತ್ಯದಲ್ಲಿ ಮೆಗಾ ಹರಾಜು (Mega Auction) ನಡೆಯಲಿದ್ದು, ಈ ಒಂದು ವಿಚಾರ ಕ್ರೀಡಾ ಲೋಕದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ.
ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದೀಗ ರಿಷಭ್ ಪಂತ್ (Rishabh Pant) ಟ್ವೀಟ್ ಒಂದನ್ನು ಮಾಡಿದ್ದು, ಪಂತ್ 18ನೇ ಆವೃತ್ತಿಯಲ್ಲಿ ಡೆಲ್ಲಿ ಪರ (Delhi Capitals) ಆಡುವುದಿಲ್ಲ ಎಂಬ ವಿವಾರ ನಿಜವಾಗುತ್ತೋ ಏನೋ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಈ ಮೊದಲು ಕೋಚ್ ರಿಕಿ ಪಾಂಟಿಂಗ್ರನ್ನು ತೆಗೆದು ಹಾಕುವ ಮೂಲಕ ಸುದ್ದಿಯಾಗಿದ್ದ ಫ್ರಾಂಚೈಸಿಯೂ ಇದೀಗ ಪಂತ್ರನ್ನು ವತಂಡದಿಂದ ಹೊರಹಾಕಲು ತಯಾರಿ ನಡೆಸಿದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಿಷಭ್ (Rishabh Pant) ಟ್ವೀಟ್ ವೈರಲ್ ಆಗಿದೆ.
ಹರಾಜಿಗೆ ಹೋದರೆ ನಾನು ಮಾರಾಟವಾಗಬಹುದೇ ಅಥವಾ ಇಲ್ಲವೇ ಮತ್ತು ಎಷ್ಟು ಬೆಲೆಗೆ? ಎಂದು ಅಭಿಮಾನಿಗಳನ್ನು ಕೇಳಿದ್ದಾರೆ. ಈ ಟ್ವೀಟ್ (Tweet) ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ನೀವು ಹರಾಜಿನಲ್ಲಿ ಕಾಣಿಸಿಕೊಂಡರೆ 20 ಕೋಟಿ ರೂಪಾಯಿಗೆ ಬಿಕರಿಯಾಗುತ್ತೀರಾ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ನೀವೊಬ್ಬ ಲೆಜೆಂಡ್ ಆಟಗಾರನಾಗಿದ್ದು, ನಿಮಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಮೆಂಟ್ ಹಾಕಿದ್ದಾರೆ. ಈ ಟ್ವೀಟ್ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
18ನೇ ಆವೃತ್ತಿಗೆ ಸಂಬಂಧಿಸಿದ ರಿಟೇನ್ ಪಟ್ಟಿ ಈ ತಿಂಗಲ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಅಂತಿಮವಾಗಿ ಯಾವ ಆಟಗಾರ ತಂಡದಲ್ಲಿ ಉಳಿಯಲಿದ್ದಾನೆ. ಇನ್ಯಾವ ಆಟಗಾರ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾನೆ ಎಂಬುದು ತಿಳಿಯಲಿದೆ. ಒಂದು ವೇಳೆ ರಿಷಭ್ ಪಂತ್ (Rishabh Pant) ಏನಾದರೂ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ತಂಡಗಳ ನಡುವೆ ಖರೀದಿಗಾಗಿ ಪೈಪೋಟಿ ಬೀಳುವುದಂತು ಪಕ್ಕಾ.