

ನವದೆಹಲಿ: ಹಾರ್ಲೆ ಡೇವಿಡ್ಸನ್ ಬೈಕ್ ಮೇಲೇರಿ ಕುಳಿತದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರ ನಡೆ ಈಗ ವಿವಾದಕ್ಕೀಡಾಗಿದೆ. ಅವರು ಕುಳಿತ ಬೈಕ್ನ ನಂಬರ್ ಪ್ಲೇಟ್ ಟ್ರೇಸ್ ಮಾಡಿರುವ ಸಾಮಾಜಿಕ ಜಾಲತಾಣಿಗರು ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಬೈಕ್ನ ನೋಂದಣಿ ಸಂಖ್ಯೆ CG05BP0015 ಎಂದಿದೆ. ಈ ಬೈಕ್ ರೋಹಿತ್ ಸೋನ್ಬಜಿ ಮುಸಲೆ ಅವರಿಗೆ ಸೇರಿದ್ದು. ಈತ ನಾಗಪುರದ ಬಿಜೆಪಿ ನಾಯಕ ಸೋನ್ಬಾ ಮುಸಲೆ ಅವರ ಪುತ್ರ. ಸೋನ್ಬಾ ಮುಸಲೆ ಸೋನೆರ್ನಲ್ಲಿ 2014ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಯಾಗಿದ್ದವರು.
ಇದನ್ನೂ ಓದಿ: ನಮ್ಮ ಬೇರುಗಳೇ ಶಾಶ್ವತ…
ಸರಿಸುಮಾರು ಅರ್ಧ ಕೋಟಿ ರೂಪಾಯಿ ಬೆಲೆ ಬಾಳುವ ಬೈಕ್ ಅನ್ನು ಜಿಲ್ಲಾ ಪಂಚಾಯಿತಿಯ ಒಬ್ಬ ಮಾಜಿ ಸದಸ್ಯ ಖರೀದಿಸುತ್ತಾನೆ ಎಂದರೆ ಆತನ ಬಳಿ ಎಷ್ಟು ದುಡ್ಡಿರಬಹುದು ಎಂಬುದು ಊಹಿಸಿ, ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಸಲಾಂ ಎಂಬಿತ್ಯಾದಿ ವಿಡಂಬನೆಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿವೆ. (ಏಜೆನ್ಸೀಸ್)