ಹಾರ್ಲೆ ಬೈಕ್​ಗೆ ಮರುಳಾಗದವರಿಲ್ಲ- ಹೊಸ ಫ್ಯಾನ್ ಯಾರು ನೋಡಿ!

CJI Justice S A Bobde riding harle davidson's bike
Published on

ನವದೆಹಲಿ: ಹಾರ್ಲೆ ಡೇವಿಡ್​​ಸನ್​'ಸ್ ಬೈಕ್​ ಎಂದರೆ ಸಾಕು ಯುವಜನ ಬಿಡಿ ಎಂಥವರ ಕಿವಿಯೂ ನೆಟ್ಟಗಾಗುತ್ತವೆ, ಕಿವಿಯೂ ಚುರುಕಾಗುತ್ತದೆ. ಒಮ್ಮೆ ರೈಡ್ ಮಾಡಿಬಿಡೋಣ ಎನ್ನುತ್ತದೆ ಮನಸ್ಸು. ಇಂಥ ಬೈಕ್​ನ ಹೊಸ ಫ್ಯಾನ್ ಯಾರು ನೋಡಿ..

ಲಾಕ್​ಡೌನ್​ ಶುರುವಾದ ನಂತರದಲ್ಲಿ ವೀಕ್​ಎಂಡ್​ ಅಂದ್ರೆ ಬಾಕಿ ಅಸೈನ್​ಮೆಂಟ್ ಮುಗಿಸುವುದು, ಮನೆ ಸ್ವಚ್ಛಗೊಳಿಸುವುದು, ಸ್ವಲ್ಪ ವಿಶ್ರಾಂತಿ ಪಡೆಯುವುದು ಮತ್ತು ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮುಂತಾದವುಗಳಲ್ಲಿ ಸಿನಿಮಾ, ಸೀರಿಯಲ್, ವೆಬ್​ಸೀರೀಸ್​ ಗಳ ವೀಕ್ಷಣೆ ಅಷ್ಟೇ. ಅದಕ್ಕೂ ಹೆಚ್ಚಿನದು ಏನುಮಾಡಬಹುದು? ಸೆಲೆಬ್ರಿಟಿಗಳು ಇನ್ನೂ ಹೆಚ್ಚಿನದನ್ನು ಮಾಡಬಹುದು. ಆದರೆ ಭಾರತದ ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿಯವರು ಏನು ಮಾಡಬಹುದೆಂಬ ನಿರೀಕ್ಷೆಯೂ, ಕಲ್ಪನೆಯೂ ಯಾರಿಗೂ ಇಲ್ಲ.

ಸಾಮಾನ್ಯರಂತೆ ಟಿ-ಶರ್ಟ್​ ಮತ್ತು ಸ್ನೀಕರ್ಸ್​ ಧರಿಸಿದ ಸಿಜೆಐ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರು ಭಾನುವಾರ ಹಾರ್ಲೆ ಡೇವಿಡ್​​ಸನ್'ಸ್​ ಬೈಕ್ ಏರಿ ಕುಳಿತ ದೃಶ್ಯ ಅನೇಕರ ಅಚ್ಚರಿಗೆ ಕಾರಣವಾಯಿತು. ಹಾರ್ಲೆ ಡೇವಿಡ್​ಸನ್​ ಸಿವಿಒ 2020 ಲಿಮಿಟೆಡ್ ಎಡಿಷನ್ ಬೈಕ್ ಅದು!. ಇದರ ಎಕ್ಸ್​ ಷೋರೂಂ ಬೆಲೆ 51 ಲಕ್ಷ ರೂಪಾಯಿ. 2000 ಸಿಸಿ ಎಂಜಿನ್​, ವಿ-ಟ್ವಿನ್​ ಎಂಜಿನ್​ ಹೊಂದಿರುವ ಬೈಕ್​ ಇದಾಗಿದ್ದು, 166 ಎನ್​ಎಂ ಟೋರ್ಕ್​ ಇದೆ. ನ್ಯಾಯಮೂರ್ತಿ ಎಸ್​.ಎ.ಬೊಬ್ಡೆಯವರು ಈ ರೀತಿ ಕಾಣಿಸಿಕೊಂಡದ್ದು ನಾಗಪುರದಲ್ಲಿ. ಅವರಿಗೆ ಬೈಕ್​ಗಳೆಂದರೆ ಅದೇನೋ ಕ್ರೇಜ್​ ಅಂತ ಪದೇಪದೆ ಹೇಳುತ್ತಿರುತ್ತಾರೆ. ಕಳೆದ ವರ್ಷವೂ ಅವರು ಹಾರ್ಲೆ ಡೇವಿಡ್​ಸನ್ ಬೈಕ್​ ಟೆಸ್ಟ್ ಡ್ರೈವ್ ಮಾಡಿದ್ದರು.

ಜೂನ್​ 22ರಂದು ಅವರು ನಾಗಪುರದಿಂದಲೇ ವಿಡಿಯೋ ಕಾನ್ಫರೆನ್ಸ್ ಮಾಡಿ ಜಗನ್ನಾಥ ರಥ ಯಾತ್ರೆ ಕೇಶ್​ನ ವಿಚಾರಣೆ ನಡೆಸಿ ತೀರ್ಪು ನೀಡಿ ದಾಖಲೆ ನಿರ್ಮಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net