ಲಿಂಗ ಸೇವೆಯಿಂದ ಕಷ್ಟ ಕಾರ್ಪಣ್ಯ ದೂರ

shivanubhava
ಸೊರಬದ ಮುರುಘಾ ಮಠದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಕಾಶಿಯಾತ್ರೆ ಪೂರೈಸಿದ ಭಕ್ತರನ್ನು ಸನ್ಮಾನಿಸಲಾಯಿತು. ಶ್ರೀ ಮಹಾಂತ ಸ್ವಾಮೀಜಿ, ಸದಾನಂದ ಗೌಡ, ಗೀತಾ ಮಲ್ಲಿಕಾರ್ಜುನ, ಅಶೋಕ್ ನಾಯ್ಕ, ಯು.ಶಶಿಕಲಾ, ದಯಾನಂದ ಇತರರಿದ್ದರು.
Published on

ಸೊರಬ: ಗುರು ಲಿಂಗ ಸೇವೆಯಿಂದ ದೇವರು ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಮನುಷ್ಯನ ಸುಂದರ ಬದುಕಿಗೆ ಅನುವು ಮಾಡಿಕೊಡುತ್ತಾನೆ ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 229ನೇ ಮಾಸಿಕ ಶಿವಾನುಭವ, ಕರ್ನಾಟಕದ ಗಾಂಧಿ ಎಂದು ಕರೆಯಲ್ಪಡುವ ಎಣ್ಣೆಕೊಪ್ಪದ ಸರ್ದಾರ್ ಮಲ್ಲಿಕಾರ್ಜುನ ಗೌಡರ 120 ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬದುಕಿನಲ್ಲಿ ಮಾನವೀಯ ಮೌಲ್ಯಗಳು ಮುಖ್ಯ. ಅಧ್ಯಾತ್ಮದ ಮಾರ್ಗದಲ್ಲಿ ನಡೆದಾಗ ಬದುಕು ಸುಂದರವಾಗುತ್ತದೆ. ಗುರು-ಶಿಷ್ಯರು, ಶರಣ ಪರಂಪರೆಗಳಿಂದ ನಮ್ಮ ಜೀವನದ ಮೌಲ್ಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಗುರುವಿನ ಮೂಲಕ ವಿಚಾರಗಳು ಮೂಡಿ ಬಂದು, ಜ್ಞಾನವೆಂಬ ದೀಪವ ಹಚ್ಚಿ, ಮನಸ್ಸಿನ ಕೆಟ್ಟ ಗುಣಗಳು ದೂರವಾಗುತ್ತವೆ ಎಂದರು.

ಫೆ.5ರಿಂದ 7ವರೆಗೆ ಜಡೆ ಮಠದಲ್ಲಿ ಕರ್ತೃ ಗದ್ದುಗೆಯ ಶ್ರೀ ಸಿದ್ಧವೃಷಭೇಂದ್ರ ಶಿವಯೋಗಿಗಳ ರಥೋತ್ಸವ ಜಾತ್ರಾಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಭಕ್ತರು ಪಾಲ್ಗೊಳುವಂತೆ ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಶಿವಮೊಗ್ಗ ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಮಂಡಳಿ ಅಧ್ಯಕ್ಷ ಅಶೋಕ್ ನಾಯ್ಕ ಅಂಡಗಿ ಹಾಗೂ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಗುರುಕುಮಾರ ಪಾಟೀಲ್ ಮಾತನಾಡಿದರು.

ಶಿಕಾರಿಪುರ ಹಾಗೂ ಸೊರಬ ಘನ ವೈಭವ ಕುರಿತು ಯು.ಶಶಿಕಲಾ ಮನೋಹರ್ ಬರೆದ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾಶಿಯಾತ್ರೆ ಪೂರೈಸಿಬಂದ ಭಕ್ತರನ್ನು ಮಠದಿಂದ ಸನ್ಮಾನಿಸಲಾಯಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಮಣ್ಣ ಭಂಜತ್ರಿ ಅವರಿಂದ ಶಾಹನಾಯಿ ವಾದನ ನಡೆಯಿತು.

ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ದಯಾನಂದ ತ್ಯಾವಗೋಡು, ಮಠದ ಕಾರ್ಯದರ್ಶಿ ಡಿ. ಶಿವಯೋಗಿ ದೂಪದಮಠ, ಚಂದ್ರಶೇಖರ್ ನಿಜಗುಣ, ಮನೋಹರ್, ಸದಾನಂದ ಗೌಡ, ಶಿವಲಿಂಗೇಗೌಡ, ರಾಜುಗೌಡ, ರೇಖಾ ಜಗದೀಶ್, ರೇಣುಕಮ್ಮ ಗೌಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net