ಹನುಮಂತ ಬಿಗ್​ಬಾಸ್​​ ಸೀಸನ್ 11ರ ವಿನ್ನರ್​: ತ್ರಿವಿಕ್ರಮ್​ ರನ್ನರ್​ ಅಪ್​

dk (15) (1)
Published on

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಇದೀಗ ಯಶಸ್ವಿ 16 ವಾರಗಳನ್ನು ಪೂರೈಸಿ ಕೊನೆ ಹಂತಕ್ಕೆ ಬಂದಿದ್ದು ಎಲ್ಲರೂ ಅಂದುಕೊಂಡಂತೆ ಹನುಮಂತ ಸೀಸನ್ 11ರ ವಿನ್ನರ್​ ಆಗಿ ಹೊರ ಹೊಮ್ಮಿದ್ದು,  ತ್ರಿವಿಕ್ರಮ್​ ರನ್ನರ್​ ಆಪ್​ ಆಗಿದ್ದಾರೆ.

ಕೊನೆಯ 15 ವಾರಗಳ ಬಳಿಕ ಮನೆಯಲ್ಲಿ ಉಳಿದುಕೊಂಡಿದ್ದ ಟಾಪ್​ 6 ಮಂದಿಯಲ್ಲಿ ನಡೆದ ಪೈಪೋಟಿಯಲ್ಲಿ ಶನಿವಾರ ಭವ್ಯಾ ಹೊರ ಬಂದರು. ಬಳಿಕ ಭಾನುವಾರ ಉಗ್ರಂ ಮಂಜು ಹೊರ ಬಿದ್ದ ಬೆನ್ನಲ್ಲೆ ಮೋಕ್ಷಿತಾ ಕೂಡ ಹೊರ ನಡೆದರು. ನಂತರ ಫೈನಲ್​​ನ ಮೂರು ಕಂಟೆಸ್ಟ್​ನಲ್ಲಿ ರಜತ್​​ ಹೊರ ಬಂದ ಬಳಿಕ ಉಳಿದ ಇಬ್ಬರಲ್ಲಿ (ಹನುಮಂತ ಮತ್ತು ತ್ರಿವಿಕ್ರಮ) ರನ್ನರ್​​ ಮತ್ತು ವಿನ್ನರ್​ ಯಾರೆಂದು ಘೋಷಿಸುವುದೊಂದೆ ಬಾಕಿ ಇತ್ತು. ಕೊನೆಯದಾಗಿ ಕಿಚ್ಚ ಸುದೀಪ ಪ್ರತಿ ಸೀಸನ್​​ನಂತೆ ಬಲ ಮತ್ತು ಎಡ ಕೈ ಎತ್ತುವ ಮೂಲಕ ಹನುಂಮಂತ ವಿನ್ನರ್​ ಎಂದು ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net