ಈ ಬಹುನಿರೀಕ್ಷಿತ ಚಿತ್ರಕ್ಕಿಲ್ಲ ಪ್ಯಾನ್ ಇಂಡಿಯಾ ರಿಲೀಸ್?

ವಿಜಯವಾಣಿ - 2024-01-11T210101.063
Published on

ಬೆಂಗಳೂರು: ಈ ವರ್ಷದ ಮೊದಲ ವಾರದಲ್ಲಿ ಹಲವು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದು, ಟ್ರೇಲರ್, ಟೀಸರ್​​ ಮೂಲಕವೇ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಚಿತ್ರಗಳು ಸದ್ಯ ರಿಲೀಸ್​ಗೆ ಕ್ಷಣಗಣನೆ ಎಣಿಸುತ್ತಿದೆ. ಈ ಸಾಲಿನಲ್ಲಿ ಇದೀಗ ಬಹುನಿರೀಕ್ಷಿತ 'ಹನು-ಮಾನ್' ಕೂಡ ಇದ್ದು,​ ಇದೇ ಜನವರಿ 12ರಂದು ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಯುವ ನಟ ತೇಜ ಸಜ್ಜ ಮತ್ತು ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ವರ್ಮಾ ಕಾಂಬಿನೇಷ್​ನಲ್ಲಿ ಮೂಡಿಬಂದಿರುವ 'ಹನು-ಮಾನ್'​, ವಿಎಫ್‌ಎಕ್ಸ್‌ಯಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಅಧಿಕ ಬುಕಿಂಗ್ ಪಡೆದುಕೊಂಡಿರುವ ಚಿತ್ರ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದ್ದು, ರಿಲೀಸ್​ ಖುಷಿಯ ಮಧ್ಯೆ ಬೇಸರದ ಸಂಗತಿಯೊಂದು ಹೊರಬಿದ್ದಿದೆ.

ಮೊದಲಿಗೆ 5 ವಿದೇಶಿ ಭಾಷೆಗಳು ಸೇರಿದಂತೆ 11 ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದ್ರೆ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಪೋಸ್ಟರ್‌ಗಳು ಮತ್ತು ಇತರ ಆನ್‌ಲೈನ್ ಮತ್ತು ಆಫ್‌ಲೈನ್ ಪ್ರಚಾರಗಳಲ್ಲಿ ಅದೇ ಪ್ರಚಾರವನ್ನು ತಂಡವು ಕೈಬಿಟ್ಟಿತು. ಇದರ ಹಿಂದಿರುವ ಅಸಲಿ ಕಾರಣವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

ವರದಿಗಳ ಪ್ರಕಾರ ಚಿತ್ರವು ಮರಾಠಿ, ಇಂಗ್ಲಿಷ್, ಸ್ಪ್ಯಾನಿಷ್, ಕೊರಿಯನ್, ಚೈನೀಸ್ ಮತ್ತು ಜಪಾನೀಸ್ ಭಾಷೆಗಳಲ್ಲಿ ಬಿಡುಗಡೆಯಾಗುವುದರ ಕುರಿತು ಇಲ್ಲಿಯವರೆಗೂ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ. ಚಿತ್ರದಲ್ಲಿ ತೇಜ ಸಜ್ಜ, ಅಮೃತಾ ಅಯ್ಯರ್, ವಿನಯ್ ರೈ, ವರಲಕ್ಷ್ಮಿ ಶರತ್‌ಕುಮಾರ್, ಸಮುದ್ರಕನಿ ಮುಂತಾದವರ ತಾರಾಗಣವಿದೆ. ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್‌ನ ಕೆ. ನಿರಂಜನ್ ರೆಡ್ಡಿ ನಿರ್ಮಾಣದ ಈ ಚಿತ್ರಕ್ಕೆ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಅವರ ಸಂಗೀತ ಸಹಯೋಗದವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net