More

    4 ವರ್ಷಗಳ ಹಿಂದೆ ಈ ಷೇರುಗಳಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಈಗ 10 ಲಕ್ಷ ರೂ. ಆಗುತ್ತಿತ್ತು!!

    ಮುಂಬೈ: ರೇಲ್ ವಿಕಾಸ್ ನಿಗಮ್ ಲಿಮಿಟೆಡ್ ಕಂಪನಿಯು 24.01.2003 ರಂದು ಸ್ಥಾಪಿತವಾಯಿತು. ಮಾರ್ಚ್ 2005 ರಲ್ಲಿ ಮಂಡಳಿಯ ಎಲ್ಲಾ ನಿರ್ದೇಶಕರ ನೇಮಕಾತಿಯ ನಂತರ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿತು. ರೇಲ್​ ವಿಕಾಸ್ ನಿಗಮ್ ಲಿಮಿಟೆಡ್ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಯೋಜನೆಯ ಅನುಷ್ಠಾನ ಮತ್ತು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ರೈಲ್ವೆ ಸಚಿವಾಲಯದ ನಿರ್ಮಾಣ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ.

    ರೈಲ್ ವಿಕಾಸ್ ನಿಗಮ ಲಿಮಿಟೆಡ್​ ಷೇರುಗಳು ಹೊಸ ವರ್ಷದಲ್ಲಿ ಅದ್ಭುತ ಆರಂಭವನ್ನು ಕಂಡಿವೆ. ಈ ರೈಲ್ವೆಯ ಷೇರು ಬುಲೆಟ್ ರೈಲಿನಂತೆ ಓಡುತ್ತಿದೆ. ಜನವರಿ ತಿಂಗಳಲ್ಲಿ ಇದುವರೆಗೆ ಶೇಕಡಾ 7 ರಷ್ಟು ಹೆಚ್ಚಳ ಕಂಡಿದೆ.

    ಬುಧವಾರದಂದು ಈ ಷೇರು ಬೆಲೆ ಶೇ.6.29ಕ್ಕೆ ಹೆಚ್ಚಿದೆ. ಗುರುವಾರ ಕೂಡ 2.50 ರೂಪಾಯಿ ಹೆಚ್ಚಳವಾಗಿ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ.

    ನಾಲ್ಕು ವರ್ಷಗಳ ಈ ಕಂಪನಿಯ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ತಾಳ್ಮೆಯಿಂದ ಕಾದಿರುವವರು ಈಗ ಗಳಿಸಿರುವ ಮೊತ್ತವು ಅಚ್ಚರಿ ಮೂಡಿಸುವಂತಿದೆ. ನಾಲ್ಕ ವರ್ಷಗಳ ಹಿಂದಿನ 1 ಲಕ್ಷ ರೂಪಾಯಿ ಹೂಡಿಕೆಯು ಈಗ 9.97 ಲಕ್ಷ ರೂಪಾಯಿ ಆಗಿದೆ. ಬಹುತೇಕ 10 ಪಟ್ಟು ಹೆಚ್ಚುವ ಮೂಲಕ ಹೂಡಿಕೆದಾರರನ್ನು ಸಂತಸಪಡುವಂತೆ ಮಾಡಿದೆ.

    ಕಳೆದ ವರ್ಷದಲ್ಲಿ ಕೂಡ ಹೂಡಿಕೆ ಮಾಡಿದವರು ಕೂಡ ಉತ್ತಮ ಲಾಭವನ್ನು ಹೊಂದಿದ್ದಾರೆ. ಈ ಕಂಪನಿಯ ಷೇರು ಒಂದು ವರ್ಷದಲ್ಲಿ 172 ಪ್ರತಿಶತಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿದೆ. ಕಳೆದ ಒಂದೂವರೆ ವರ್ಷದಲ್ಲಿ ಈ ಷೇರು ಬೆಲೆಯು 544.91% ಲಾಭ ತಂದುಕೊಟ್ಟಿದೆ.

    ಯಾವುದೇ ರೀತಿಯ ಷೇರು ಖರೀದಿಸುವ ಮೊದಲು ಅದರ ಸಾಮರ್ಥ್ಯಗಳು, ದೌರ್ಬಲ್ಯಗಳು, ಸಂಭಾವ್ಯ ರಿಸ್ಕ್​ಗಳನ್ನು ಪರಿಗಣಿಸಬೇಕು. ಸೂಕ್ತ ಲೆಕ್ಕಾಚಾರ, ಸಮಯದಲ್ಲಿ ಹೂಡಿಕೆ ನಿರ್ಧಾರ ಕೈಗೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts