ತಪ್ಪಿತಸ್ಥನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ: ಮಾಜಿ ಸಂಸದ

justice
Published on

ಬಿಹಾರ: ಐಎಎಸ್ ಅಧಿಕಾರಿಯೊಬ್ಬರ ಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ 14 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದ ಬಿಹಾರದ ಮಾಜಿ ಸಂಸದ ಆನಂದ್ ಮೋಹನ್ ಸಿಂಗ್ ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.

ಬಿಹಾರದ ಅರಾರಿಯಾದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಈ ದೇಶ ಯಾರ ಸ್ವತ್ತಲ್ಲ. ನಾನು ಕಾನೂನು ಮತ್ತು ಸಂವಿಧಾನವನ್ನು ನಂಬುತ್ತೇನೆ. ಯಾವುದೇ ದೂರುಗಳಿಲ್ಲದೆ 15 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ್ದೇನೆ. ನಾನು ತಪ್ಪಿತಸ್ಥನೆಂದು ಸರ್ಕಾರ ನಂಬಿದರೆ ನಾನು ಗಲ್ಲಿಗೇರಲು ಸಿದ್ಧ ಎಂದು ಮಾಜಿ ಸಂಸದರು ಹೇಳಿದರು.

1994ರ ದುಷ್ಕೃತ್ಯವೊಂದರಲ್ಲಿ ಅಧಿಕಾರಿಯೊಬ್ಬರ ಹತ್ಯೆಯಾಗಿತ್ತು. ಹತ್ಯೆಗೈದ ಗುಂಪನ್ನು ಪ್ರಚೋದಿಸಿದ ಆರೋಪದಲ್ಲಿ ಮಾಜಿ ಸಂಸದ ತಪ್ಪಿತಸ್ಥನೆಂದು ಸಾಬೀತಾಗಿತ್ತು. ಆದರೆ ಸದ್ಯ, ಬಿಹಾರ ಸರ್ಕಾರ ಜೈಲಿನ ನೀತಿ-ನಿಯಮಗಳನ್ನು ಬದಲಾಯಿಸಿದ ಬೆನ್ನಲ್ಲೇ ಮಾಜಿ ಸಂಸದ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಜತೆಗೆ, 27 ಅಪರಾಧಿಗಳ ಬಿಡುಗಡೆಗೂ ಇದು ದಾರಿ ಮಾಡಿಕೊಟ್ಟಿದೆ. ಆನಂದ್ ಮೋಹನ್ ಸಿಂಗ್ ಅವರನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಕುರಿತು ಸುಪ್ರೀಂ ಕೋರ್ಟ್ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net