More

    ಶುಶ್ರೂಷಕರಿಗೆ ಗುಣಮಟ್ಟ ಶಿಕ್ಷಣ ಒದಗಿಸುವ ಅವಶ್ಯಕತೆಯಿದೆ:ಕುಲಪತಿ ಡಾ.ಎಂ.ಕೆ.ರಮೇಶ್

    ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಪುಮುಖ ಪಾತ್ರವಹಿಸುವ ಶುಶ್ರೂಷಕರಿಗೆ ಗುಣಮಟ್ಟದ ಶಿಕ್ಷಣ ಹಾಗೂ ಪರಿಣಾಮಕಾರಿ ತರಬೇತಿ ಒದಗಿಸುವ ಆಗತ್ಯವಿದೆ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್ ಹೇಳಿದ್ದಾರೆ.

    ಆಂಗ್ಲೋ-ಇಂಡಿಯನ್ ಯೂನಿಟಿ ಸೆಂಟರ್ ಸಹಯೋಗದಲ್ಲಿ ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆ್ ನರ್ಸಿಂಗ್ ವತಿಯಿಂದ ಶುಕ್ರವಾರ ವಿಶ್ವೇಶ್ವರಯ್ಯಪುರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೋವಿಡ್ ಸಂದರ್ಭದಲ್ಲಿ ಶುಶ್ರೂಷಕರು, ತಮ್ಮ ಜೀವವನ್ನು ಬದಿಗೊತ್ತಿ ರೋಗಿಗಳ ಸೇವೆಯಲ್ಲಿ ತೊಡಗಿದ್ದ ಕಾರ್ಯ ಶ್ಲಾಘನೀಯ. ಮುಂದಿನ 20 ವರ್ಷಗಳಲ್ಲಿ ವಿಶ್ವದಲ್ಲೇ ಭಾರತ, ಆರೋಗ್ಯ ವಲಯದಲ್ಲಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ. ನರ್ಸಿಂಗ್ ಸಂಸ್ಥೆಗಳಿಂದ ಅಧಿಕ ಸಂಖ್ಯೆಯ ಶುಶ್ರೂಷಕರು ರೂಪುಗೊಂಡರೆ ಸಾಲದು, ಅವರಿಗೆ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡುವ ಬಗ್ಗೆ ನಾವೆಲ್ಲರೂ ಗಮನಹರಿಸಬೇಕು ಎಂದರು.

    ಇದನ್ನೂ ಓದಿ: ಮೊದಲ ಬಾರಿಯ ಫೋಟೋಶೂಟ್​​​ನಲ್ಲಿ ಕಣ್ಣೀರಿಟ್ಟಿದ್ದ ನಟಿ ಕೃತಿ ಸನೋನ್!

    ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದ ನಂತರ ರೋಗಿಗಳ ಆರೋಗ್ಯ ಸುಧಾರಣೆ ಜವಾಬ್ದಾರಿ ಶ್ರುಶೂಷಕರ ಮೇಲಿರುತ್ತದೆ. ವೈದ್ಯರಿಗಿಂತ ನರ್ಸ್‌ಗಳ ಪ್ರಾಮಾಣಿಕ ಸಹಾನುಭೂತಿಯ ಸೇವೆಯಿಂದ ರೋಗಿಗಳು ಶೀಘ್ರ ಚೇತರಿಸಿಕೊಳ್ಳುತ್ತಾರೆ. ಶಸ್ತ್ರಚಿಕಿತ್ಸೆಯ ಕೋಣೆಯಲ್ಲಿ ಹೊಸ ವೈದ್ಯರಿಗೆ ಹೆಚ್ಚು ಅನುಭವವುಳ್ಳ ಶುಶ್ರೂಷಕರು ಮಾರ್ಗದರ್ಶಕರಾಗುತ್ತಾರೆ.ಅಮೆರಿಕಾ ಸೇರಿ ಇತರೆ ರಾಷ್ಟ್ರಗಳಲ್ಲಿ ಸಾಮಾನ್ಯ ಚಿಕಿತ್ಸೆಗಾಗಿ ವರ್ಷಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಕಡಿಮೆ ವಚ್ಚದಲ್ಲಿ ವಿದೇಶೀಯರು ನಮ್ಮ ದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂ.ಕೆ.ರಮೇಶ್ ವಿವರಿಸಿದರು.

    ಇದನ್ನೂ ಓದಿ: ಚುನಾವಣಾ ಫಲಿತಾಂಶಕ್ಕೂ ಮೊದಲೇ ಶಾಸಕರ ನಾಮಫಲಕ ತಂದ ಜೆಡಿಎಸ್ ಅಭ್ಯರ್ಥಿ!

    ಕರ್ನಾಟಕ ರಾಜ್ಯ ನರ್ಸಿಂಗ್ ಪರಿಷತ್‌ನ ರಿಜಿಸ್ಟ್ರಾರ್ ಓ. ಪುಸನ್ನಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹನುಮಂತರಾಯಪ್ಪ, ಡಾ.ಎಂ.ಬಿ.ಮಂಜೇಗೌಡ, ಆಂಗ್ಲೋ ಇಂಡಿಯನ್ ಯೂನಿಟಿ ಸೆಂಟರ್ ಅಧ್ಯಕ್ಷ ಐವಾನ್ ನಿಗ್ಲಿ, ಕೆಂಪೇಗೌಡ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲೆ ಡಾ.ವಿ.ಟಿ.ಲಕ್ಷಮಮ್ಮ ಮತ್ತಿತರರಿದ್ದರು.

    ವೈದ್ಯಕೀಯ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಆಗುವ ಆವಿಷ್ಕಾರಗಳ ಮತ್ತು ತಂತ್ರಜ್ಞಾನಗಳ ಅರಿವು ನಮಗೆಲ್ಲರಿಗೂ ಗೊತ್ತಿರಬೇಕು. ನುರಿತ ಶ್ರುಶೂಷಕರಿಂದ ಹಲವು ವಿಧದ ಚುಚ್ಚುಮದ್ದು ನೀಡುವ ಬಗ್ಗೆ ಮಾಹಿತಿ ಪಡೆದಿದ್ದೆ. ಈ ಕ್ಷೇತ್ರದಲ್ಲಿ ತಾಳ್ಮೆ ಮತ್ತು ಮಾನವೀಯ ಗುಣಗಳು ಮುಖ್ಯವಾಗಿರಲಿದೆ ಎಂದು ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಡಿ.ಕೆ.ರಮೇಶ್ ಹೇಳಿದ್ದಾರೆ.

    ಮೊದಲ ಬಾರಿಯ ಫೋಟೋಶೂಟ್​​​ನಲ್ಲಿ ಕಣ್ಣೀರಿಟ್ಟಿದ್ದ ನಟಿ ಕೃತಿ ಸನೋನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts