ಸಿನಿಮಾ

ಮೊದಲ ಬಾರಿಯ ಫೋಟೋಶೂಟ್​​​ನಲ್ಲಿ ಕಣ್ಣೀರಿಟ್ಟಿದ್ದ ನಟಿ ಕೃತಿ ಸನೋನ್!

ಮುಂಬೈ: ಬಾಲಿವುಡ್​ ನಟಿ ಕೃತಿ ಸನೋನ್​ ಅವರು ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಈಕೆ ಸಿನಿಮಾ ವಿಚಾರವಾಗಿ ಸುದ್ದಿಯಾಗುವುದಕ್ಕಿಂತ ಫ್ಯಾಶನ್​ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ಅವರು ತಾವು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗ ಯಾವೆಲ್ಲಾ ಸನ್ನಿವೇಶಗಗಳು ಎದುರಾದವು ಎಂದು ಹೇಳಿಕೊಂಡಿದ್ದಾರೆ.

ನಟಿ ಆಗುವುದಕ್ಕೂ ಮುನ್ನ ಕೃತಿ ಸನೋನ್​ ಅವರು ಮಾಡೆಲ್​ ಆಗಿದ್ದರು. ಮಾಡೆಲಿಂಗ್​ ಆರಂಭಿಸಿದಾಗ ಮೊದಲು ಬಾರಿ ಫೋಟೋಶೂಟ್​ ಮಾಡಿಸಿದ ದಿನ ಅವರು ಕಣ್ಣೀರು ಹಾಕಿದ್ದರು. ಅಳುತ್ತಾ ಅವರು ಮನೆಗೆ ಬಂದಿದ್ದರು. ಈ ವಿಚಾರವಾಗಿ ಅವರೇ ಮಾತನಾಡಿದ್ದಾರೆ.

ಕೃತಿ ಸನೋನ್​ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, ನನ್ನ ತಾಯಿ ಪ್ರೊಫೆಸರ್, ಮತ್ತು ಅವರು ತಮ್ಮ ಕುಟುಂಬದಲ್ಲಿ ಕೆಲಸ ಮಾಡಿದ ಮೊದಲ ಮಹಿಳೆ. ಅವರು ಗರ್ಭಿಣಿಯಾಗಿದ್ದಾಗ ಪಿಎಚ್‌ಡಿ ಪೂರ್ಣಗೊಳಿಸಿದರು. ಕೆಲವೊಮ್ಮೆ ನೀವು ಉದಾಹರಣೆಯನ್ನು ಹೊಂದಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಹಾಗಾಗಿ ನಾನು ಮಾಡುವ ಯಾವುದೇ ಕೆಲಸದಲ್ಲಿ ನಿಜವಾಗಿಯೂ ಉತ್ತಮವಾಗಿರಬೇಕು ಎಂದು ನಾನು ಯಾವಾಗಲೂ ಭಾವಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಚುನಾವಣಾ ಫಲಿತಾಂಶಕ್ಕೂ ಮೊದಲೇ ಶಾಸಕರ ನಾಮಫಲಕ ತಂದ ಜೆಡಿಎಸ್ ಅಭ್ಯರ್ಥಿ!

ಎಲ್ಲ ಕೆಲಸವನ್ನೂ ಪರ್ಫೆಕ್ಟ್​ ಆಗಿ ಮಾಡಬೇಕು ಎಂಬುದು ನನ್ನ ಉದ್ದೇಶ ಆಗಿತ್ತು. ಆದರೆ ಆ ದಿನ ಫೋಟೋಶೂಟ್​ ನಾವು ಅಂದುಕೊಂಡ ರೀತಿ ಬರಲಿಲ್ಲ ಎಂಬ ಕಾರಣಕ್ಕೆ ಬೇಸರ ಆಗಿತ್ತು. ಫೋಟೋಶೂಟ್​ ಚೆನ್ನಾಗಿ ಆಗಲಿಲ್ಲ ಎಂಬ ಕಾರಣಕ್ಕೆ ಕಣ್ಣೀರು ಹಾಕುತ್ತ ಮನೆಗೆ ಬಂದಿದ್ದೆ ಎಂದಿದ್ದಾರೆ.

ಕೃತಿ ಸನೋನ್​ ಅವರು ‘ಆದಿಪುರುಷ್​​’ ಸಿನಿಮಾದಲ್ಲಿ ನಟಿಸಿದ್ದಾರೆ. ಜೂನ್​ 16ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಓಂ ರಾವುತ್ ಅವರು ನಿರ್ದೇಶಿಸಿದ ಆದಿಪುರುಷ ರಾಮಾಯಣವನ್ನು ಆಧರಿಸಿದ ಪೌರಾಣಿಕ ನಾಟಕವಾಗಿದೆ. ಚಿತ್ರದಲ್ಲಿ ಪ್ರಭಾಸ್ ಭಗವಾನ್ ರಾಮನಾಗಿ, ಕೃತಿ ಸನೋನ್ ಜಾನಕಿಯಾಗಿ ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಲಂಕೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ನೀರಿಕ್ಷೆಯನ್ನು ಹುಟ್ಟುಹಾಕಿದೆ.

ಇಸ್ಲಮಾಬಾದ್​ ಹೈಕೋರ್ಟ್​ನಿಂದ ಜಾಮೀನು ಮಂಜೂರು: ಇಮ್ರಾನ್​ ಖಾನ್​ಗೆ ತಾತ್ಕಾಲಿಕ ರಿಲೀಫ್​

Latest Posts

ಲೈಫ್‌ಸ್ಟೈಲ್