

ನವದೆಹಲಿ: ಹಮಾಸ್ ಉಗ್ರರು ಇಸ್ರೇಲಿಗಳು ಅಥವಾ ಪ್ಯಾಲೆಸ್ಟೀನಿಯಾದವರಾಗಿದ್ದರೂ ಮಾನವನ ದುಃಖದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅರಬ್ ದೇಶಗಳು ಅಥವಾ ಯಾವುದೇ ದೇಶವಾದರೂ ಕೇವಲ ಒಂದು ಕಡೆಯಿಂದ ತೆಗೆದುಕೊಳ್ಳಬೇಡಿ, ಪರಿಸ್ಥಿತಿಯ ಸಂಕೀರ್ಣತೆಯನ್ನು ನೋಡಲು ಪ್ರಯತ್ನಿಸಿ ಎಂದು ಇಸ್ರೇಲ್ ನ ಜನಪ್ರಿಯ ಲೇಖಕ ಯುವಲ್ ಹರಾರಿ ಒತ್ತಿಹೇಳಿದರು.
ಇದನ್ನೂ ಓದಿ: ಇಸ್ರೇಲಿಗರ ಮಾರಣ ಹೋಮದ ಮಾಸ್ಟರ್ ಮೈಂಡ್ ಸಿನ್ವಾರ್!
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಭಾರೀ ಭದ್ರತೆ ಇದ್ದ ಗಡಿಯನ್ನು ಭೇದಿಸಿ 1,400 ಕ್ಕೂ ಹೆಚ್ಚು ಜನರನ್ನು ಗುಂಡಿಕ್ಕಿ, ಇರಿದು, ಮತ್ತು ಸುಟ್ಟು ಕೊಂದರು. ಅವರಲ್ಲಿ ಹೆಚ್ಚಿನವರು ನಾಗರಿಕರು ಎಂಬುದನ್ನು ಗಮನಿಸಬೇಕು. ನಂತರ ಈ ಉಗ್ರಗುಂಪಿನ ಮೇಲೆ ಇಸ್ರೇಲ್ ಯುದ್ಧ ಘೋಷಿಸಿತು, ಉಗ್ರರ ದಾಳಿ 9/11 ಗೆ ಸಮನಾದುದು. ಹೀಗಾಗಿ ಉಗ್ರರ ಮೇಲೆ ಯಾರೂ ಕನಿಕರ ತೋರುವ ಅಗತ್ಯವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಹಮಾಸ್‌ನ ಈ ಹಠ ಯಾರಿಗೂ ಒಳ್ಳೆಯದನ್ನು ಮಾಡುತ್ತಿಲ್ಲ, ಅವರು ಈ ಪ್ರಪಂಚದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ಈ ಜಗತ್ತನ್ನು ಜ್ವಾಲೆಗೆ ಒಪ್ಪಿಸಲು ಸಿದ್ಧರಾಗಿದ್ದಾರೆ. ಹಾಗೆ ಮಾಡುವುದರಿಂದ ಅವರು ಮತ್ತೊಂದು ಜಗತ್ತಿನಲ್ಲಿ ಶಾಶ್ವತವಾದ ಆನಂದವನ್ನು ಪಡೆಯುತ್ತಾರೆ ಎಂದು ಅವರು ನಂಬುತ್ತಾರೆ" ಎಂದು ಹೇಳಿದರು.
"ಈ ಹಿಂಸಾಚಾರದ ಸ್ಪರ್ಧೆಯಲ್ಲಿ ಜಯಶಾಲಿಯಾಗಲು ಯಾರಿಗೂ ಸಾಧ್ಯವಿಲ್ಲ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಎಲ್ಲಾ ಭಯಾನಕ ಚಿತ್ರಗಳು, ಅಂತಹ ಭಯಾನಕತೆಯನ್ನು ನೋಡಬೇಡಿ. ಭಯೋತ್ಪಾದಕನಿಗೆ ಬೇಕಾದ ಸರಕು ಸಿಗುತ್ತಿದ್ದು, ಜನ ಅದನ್ನು ನೋಡುವ ಮೂಲಕ ಭಯಂಕರ ದ್ವೇಷವನ್ನು ಪೋಷಿಸುತ್ತಿದ್ದೀರಿ. ಇದಕ್ಕೆ ಸಂತ್ರಸ್ತರಿಗೆ, ಗಾಯಾಳುಗಳಿಗೆ ದಾನ ಮಾಡುವ ಮೂಲಕ ಶಾಂತಿ ನೆಲೆಸಲು ಸಹಕರಿಸಿ ಎಂದು ಹರಾರಿ ಹೇಳಿದರು.
ಪ್ಯಾಲೇಸ್ತೇನ್ ಕರಾವಳಿ ಭಾಗದಲ್ಲಿ ಉಗ್ರರು ಅಡಗಿರುವ ನೆಲೆಗಳ ಮೇಲೆ ಇಸ್ರೇಲ್ ವಾಯುಪಡೆ ದಾಳಿ ಮುಂದುವರೆಸಿದ್ದರಿಂದ ಸುಮಾರು 9,700 ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ನಿಯಂತ್ರಿತ ಸಚಿವಾಲಯ ತಿಳಿಸಿದೆ.