More

    ಇಸ್ರೇಲಿಗರ ಮಾರಣ ಹೋಮದ ಮಾಸ್ಟರ್​ ಮೈಂಡ್​ ಸಿನ್ವಾರ್!

    ನವದೆಹಲಿ: ಇಸ್ರೇಲ್ ಮೇಲೆ ಹಮಾಸ್‌ ನಡೆಸಿದ ದಾಳಿಯ ನಂತರ ಯಾಹ್ಯಾ ಸಿನ್ವಾರ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಈತ 1,300 ಇಸ್ರೇಲಿಗಳ ಮಾರಣ ಹೋಮಕ್ಕೆ ಕಾರಣವಾದ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಎಂದು ಇಸ್ರೇಲ್ ಅಧಿಕಾರಿಗಳು ಆರೋಪಿಸಿದ್ದಾರೆ.
    ಇಸ್ರೇಲ್ ಜೈಲಿನಲ್ಲಿ 24 ವರ್ಷ ಬಂಧಿತನಾಗಿದ್ದ ಈತ ಬಿಡುಗಡೆ ನಂತರ ಹಮಾಸ್ ಪಡೆಯನ್ನು ಮುನ್ನಡೆಸುತ್ತಿದ್ದು, ಇದು ನಮ್ಮ ದೃಷ್ಟಿಯಲ್ಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನಿಥಾರಿ ಹತ್ಯಾಕಾಂಡದ ಆರೋಪಿಗಳು ದೋಷಮುಕ್ತ!

    ವಿಧ್ವಂಸಕ ಚಟುವಟಿಕೆಗಳಿಂದಾಗಿ ಆತನನ್ನು 1982 ರಲ್ಲಿ ಮೊದಲು ಬಂಧಿಸಲಾಯಿತು. ಬಿಡುಗಡೆ ಬಳಿಕ ಹಮಾಸ್‌ನ ಸೇನಾ ವಿಭಾಗದ ಮುಖ್ಯಸ್ಥ ಸಲಾಹ್ ಶೆಹ್ಡೆ ಜತೆ ಸೇರಿ ಇಸ್ರೇಲ್​ ಗೂಢಚಾರರನ್ನು ಗುರಿಯಾಗಿಸುವ ಘಟಕ ಸ್ಥಾಪಿಸಿದ. ಇನ್ನು ಶೆಹ್ಡೆಯನ್ನು 1987ರಲ್ಲಿ ಇಸ್ರೇಲ್ ಪಡೆಗಳು ಗುಂಡಿಕ್ಕಿ ಕೊಂದಾಗ ಸಿನ್ವಾರ್ ಸ್ಥಾಪಿತ ಘಟಕವು ಹಮಾಸ್​ನೊಂದಿಗೆ ಲೀನವಾಯಿತು. 1988 ರಲ್ಲಿ ಇಬ್ಬರು ಇಸ್ರೇಲಿ ಸೈನಿಕರು ಮತ್ತು ನಾಲ್ವರು ಪ್ಯಾಲೆಸ್ತೇನಿಯನ್ನರ ಹತ್ಯೆ ಪ್ರಕರಣದಲ್ಲಿ ಈತನ ಕೈವಾಡ ಇದ್ದಿದ್ದರಿಂದ ನಾಲ್ಕು ವರ್ಷ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

    2015ರಲ್ಲಿ ಸಿನ್ವಾರ್ ಅಮೆರಿಕದ ವಾಂಟೆಡ್ ಅಂತರಾಷ್ಟ್ರೀಯ ಉಗ್ರರ ಪಟ್ಟಿಗೆ ಸೇರಿದ್ದ. ಬಳಿಕ ಅಮೆರಿಕಾ ಈತನನ್ನು ಭಯೋತ್ಪಾದಕ ಎಂದು ಘೋಷಿಷಿರು. 2017 ರಲ್ಲಿ ಸಿನ್ವಾರ್ ಗಾಜಾದಲ್ಲಿ ಹಮಾಸ್ ಮುಖ್ಯಸ್ಥನಾಗಿ ಆಯ್ಕೆಯಾಗಿ ಕಳೆದ ವಾರ ನಡೆದ ಮಾರಣ ಹೋಮಕ್ಕೆ ಕಾರಣನಾಗಿದ್ದಅನೆ ಎಂಬುದು ಇಸ್ರೇಲ್​ ಅಧಿಕಾರಿಗಳ ಮಾತಾಗಿದೆ.

    ಹಮಾಸ್​ನ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನಂತರ ಸಿನ್ವಾರ್ ಹಮಾಸ್ ನಾಯಕತ್ವದಲ್ಲಿ 2 ನೇ ಸ್ಥಾನದಲ್ಲಿದ್ದಾನೆ. ಹನಿಯೆಹ್ ಗಡಿಯಾಚೆ ವಾಸಿಸುತ್ತಿರುವುದರಿಂದ, ಸಿನ್ವಾರ್ ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟ ಮುಂದುವರೆಯಲು ಕಾರಣನಾಗಿದ್ದಾನೆ. ಈತ ಯಾವುದೇ ರಾಜಿ ಸೂತ್ರದ ವಿರುದ್ಧವಾಗಿದ್ದು, ಉದ್ರಿಕ್ತ ಭಾಷಣಕ್ಕೆ ಹೆಸರುವಾಸಿ. ಎಲ್ಲಿದ್ದರೂ ಹುಡುಕುತ್ತೇವೆ ಎಂದು ಇಸ್ರೇಲ್​ ಭದ್ರತಾ ಪಡೆಗಳು ವಿಶ್ವಾಸ ವ್ಯಕ್ತಪಡಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts