ಪಿಎಂ ಪೋಷಣ್​ ಯೋಜನೆಯ ಅಡುಗೆ ಸಿಬ್ಬಂದಿಗೆ ಅರ್ಧ ದಿನದ ತರಬೇತಿ

Bisiyuta
Published on

ಬೆಂಗಳೂರು: ಪಿಎಂ ಪೋಷಣ್​ ಯೋಜನೆಯ ಅಡುಗೆ ಸಿಬ್ಬಂದಿಗೆ ಶನಿವಾರ (ಆ.19) ಶಾಲಾ ಅವಧಿಯ ಬಳಿಕ ಅರ್ಧ ದಿನದ ತರಬೇತಿಯನ್ನು ಆಯೋಜಿಸಲಾಗಿದೆ.

ಜಿಲ್ಲೆಗಳ ಶಿಣಾಧಿಕಾರಿಗಳು, ತಾಲೂಕುಗಳ ಸಹಾಯಕ ನಿರ್ದೇಶಕರು, ಐವರು ಕ್ಲಸ್ಟರ್​ ಸಂಪನ್ಮೂಲ ವ್ಯಕ್ತಿ (ಸಿ.ಆರ್​.ಪಿ) ಗಳಿಗೆ ಅಡುಗೆ ಕೋಣೆಯ ಸ್ವಚ್ಛತೆ, ಸುರತೆ ಮತ್ತು ಆಹಾರ ಧಾನ್ಯಗಳ ಸಂರಕ್ಷಣೆ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ.

ತರಬೇತಿ ಪಡೆದ ಸಿ.ಆರ್​.ಪಿ. ಗಳು ತಮ್ಮ ತಾಲೂಕಿನ ಇತರ ಸಿ.ಆರ್​.ಪಿ.ಗಳಿಗೆ ತರಬೇತಿ ನೀಡಬೇಕು. ಬಳಿಕ ಎಲ್ಲ ಸಿ.ಆರ್​.ಪಿ.ಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮುಖ್ಯ ಶಿಕರು ಮತ್ತು ಎಲ್ಲಾ ಮುಖ್ಯ ಅಡುಗೆಯವರು ಮತ್ತು ಆಡುಗೆ ಸಹಾಯಕರಿಗೆ ಶನಿವಾರ ಮಧ್ಯಾಹ್ನದ ಬಳಿಕ ತರಬೇತಿ ಏರ್ಪಾಡು ಮಾಡಬೇಕು ಎಂದು ಪಿಎಂ ಪೋಷಣ್​ನ ನಿರ್ದೇಶಕರು ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net