

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ಗಳು (ಎಲ್ಯುುಎಚ್) ಹಿಮಾಲಯದ ಅತಿ ಎತ್ತರದ ಮತ್ತು ಅತ್ಯಂತ ಶಾಖ ಪ್ರದೇಶದಲ್ಲಿನ ಹಾರಾಟವನ್ನು ಯಶಸ್ವಿಯಾಗಿ ನಡೆಸಿವೆ. ಲಡಾಖ್ನ ಲೇಹ್ ಮತ್ತು ದೌಲತ್ ಬೇಗ್ ಓಲ್ಡಿ ಭಾಗದ ಹಿಮಾಲಯದ ಶ್ರೇಣಿಯಲ್ಲಿ ಕಳೆದ ಹತ್ತು ದಿನಗಳಿಂದ ಎಲ್ಯುುಎಚ್ಗಳ ಸಮಗ್ರ ಪ್ರಾತ್ಯಕ್ಷಿಕೆ ನಡೆದಿದ್ದು, ಸಮುದ್ರಮಟ್ಟದಿಂದ 3300 ಮೀಟರ್ ಎತ್ತರದ ಪ್ರದೇಶದಲ್ಲಿ ವಿವಿಧ ಹವಾಗುಣದಲ್ಲಿ ಹೆಲಿಕಾಪ್ಟರ್ಗಳು ಹಾರಾಟ ನಡೆಸಿವೆ.
ಎಲ್ಯುುಎಚ್ಗಳು ನೀಡಿದ ಪ್ರಾತ್ಯಕ್ಷಿಕೆ ತೃಪ್ತಿಕರವಾಗಿದ್ದು, ಇದರಿಂದ ಈ ಹೆಲಿಕಾಪ್ಟರ್ ಮತ್ತು ಅದರ ವ್ಯವಸ್ಥೆಗಳು ಬಳಕೆದಾರರ ಅವಶ್ಯಕತೆಯನ್ನು ಪೂರೈಸುತ್ತವೆ ಎಂಬುದು ಸಾಬೀತಾಗಿದೆ ಎಂದು ಎಚ್ಎಎಲ್ನ ಇಂಜಿನಿಯರಿಂಗ್, ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಅರುಪ್ ಚಟರ್ಜಿ ಹೇಳಿದ್ದಾರೆ.
* ಜಗತ್ತಿನ ಅತಿ ಎತ್ತರದ ಸಮರ ಭೂಮಿ ಸಿಯಾಚಿನ್ ನೀರ್ಗಲ್ಲು ಪ್ರದೇಶಕ್ಕೆ ಸಾಮಗ್ರಿ ಸಾಗಿಸುವ ಸಾಮರ್ಥ್ಯ
* ಲೇಹ್ನಲ್ಲಿ ಸಮುದ್ರಮಟ್ಟದಿಂದ 3300 ಮೀಟರ್ ಎತ್ತರದಲ್ಲಿ ಹಾರಾಟ
* ದೌಲತ್ ಬೇಗ್ ಓಲ್ಡಿಯಲ್ಲಿ ಸಮುದ್ರ ಮಟ್ಟದಿಂದ 5 ಸಾವಿರ ಮೀಟರ್ ಎತ್ತರದಲ್ಲಿರುವ ಅತ್ಯಾಧುನಿಕ ವೈಮಾನಿಕ ನಿಲ್ದಾಣದಲ್ಲಿ ಲ್ಯಾಂಡ್
* ಹಿಮಾಲಯದ ಅತಿ ಎತ್ತರದ ಹೆಲಿಪ್ಯಾಡ್ಗಳಾದ ಅಮರ್ ಮತ್ತು ಸೋನಂಗಳಲ್ಲಿ ಸುರಕ್ಷಿತ ಲ್ಯಾಂಡ್