

Bavaskar Report: ಮಹಾರಾಷ್ಟ್ರದ ಬುಲ್ದಾನ್ ಜಿಲ್ಲೆಯಲ್ಲಿ ಹಠಾತ್ ಕೂದಲು ಉದುರುವಿಕೆ ಪ್ರಕರಣಗಳು ವರದಿಗೆ ಸಂಬಂಧಪಟ್ಟಂತೆ, ಸರ್ಕಾರಿ ಪಡಿತರ ಅಂಗಡಿಗಳಿಂದ ಲಭ್ಯವಿರುವ ಗೋಧಿಯಲ್ಲಿ ಹೆಚ್ಚಿನ ಪ್ರಮಾಣದ ಸೆಲೆನಿಯಮ್ ಇರುವುದು ಇದಕ್ಕೆ ಕಾರಣ ಎಂದು ಡಾ.ಹಿಮತ್ರಾಂ ಬವಾಸ್ಕರ್ ವರದಿಯಲ್ಲಿ ಇದು ಬಹಿರಂಗವಾಗಿದೆ ಎಂದು ವರದಿ ಉಲ್ಲೇಖಿಸಿವೆ.
2024ರ ಡಿಸೆಂಬರ್ ರಿಂದ 2025ರ ಜನವರಿ ನಡುವಿನ 18 ಹಳ್ಳಿಗಳ 279 ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಘಟನೆ ರಾಷ್ಟ್ರೀಯ ಚರ್ಚೆಯ ವಿಷಯವಾದ ನಂತರ, ಆಡಳಿತವು ತನಿಖೆಗೆ ಆದೇಶಿಸಿತು. ಈ ರೋಗವು ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವತಿಯರ ಮೇಲೆ ಪರಿಣಾಮ ಬೀರಿದೆ, ಇದರಿಂದಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮತ್ತು ನಿಶ್ಚಯಿಸಿದ ವಿವಾಹಗಳು ಮೇಲೆ ಪರಿಣಾಮ ಬೀರಿದೆ. ಕೂದಲು ಉದುರುವಿಕೆಯ ಮುಜುಗರವನ್ನು ತಪ್ಪಿಸಲು ಅನೇಕ ಹುಡುಗಿಯರು ತಮ್ಮ ಸಂಪೂರ್ಣ ತಲೆಯನ್ನು ಬೋಳಿಸಿಕೊಂಡಿದ್ದಾರೆ.
ಇನ್ನು ಸಂತ್ರಸ್ತರು ಈ ಗೋಧಿಯ ಉತ್ಪನ್ನಗಳನ್ನು ಸೇವಿಸಿದ ನಂತರ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಪ್ರಾಥಮಿಕವಾಗಿ ತಲೆ ನೋವು, ಜ್ವರ, ತಲೆ ತೂರಿಕೆ, ವಾಂತಿ ಮತ್ತು ಅತಿಸಾರ ಲಕ್ಷಣಗಳು ಕಂಡುಬಂದಿವೆ. ಬಳಿಕ ತಲೆ ಕೂದಲು ಉದುರುವಿಕೆ ಆರಂಭವಾಗಿದೆ. ಪಂಜಾಬ್ ಮತ್ತು ಹರಿಯಾಣದಿಂದ ರಫ್ತು ಮಾಡಿಕೊಂಡ ಗೋಧಿ ಸ್ಥಳೀಯ ಗೋಧಿಗಿಂತ 600 ಪಟ್ಟು ಸೆಲಿನಿಯಮ್ ಇದೆ ಎಂದು ತನಿಖೆಯಿಂದ ಧೃಢಪಟ್ಟಿದೆ.
ಈ ಅಧಿಕ ಸೆಲೆನಿಯಮ್ ಕಾರಣದಿಂದಾಗಿ, ಸಂತ್ರಸ್ತರ ಕೂದಲು ಎರಡರಿಂದ ಮೂರು ದಿನದೊಳಗೆ ಎಲ್ಲಾ ಕೂದಲುಗಳು ಉದುರುತ್ತವೆ. ಅಲ್ಲದೆ, ರಕ್ತ, ಮೂತ್ರ ಮತ್ತು ಕೂದಲಿನ ಪರೀಕ್ಷೆಗಳು ಸಹ ಅಸಜವಾಗಿ ಹೆಚ್ಚಿನ ಮಟ್ಟದಲ್ಲಿ ಸೆಲೆನಿಯಂ ಕಂಡುಬಂದಿದೆ. ಹೆಚ್ಚಿನ ಮಟ್ಟದ ಸೆಲೆನಿಯಂ ಕಾರಣದಿಂದಾಗಿ ದೇಹದಲ್ಲಿ ಪೌಷ್ಟಿಕಾಂಶದ ಅಸಮತೋಲನವನ್ನು ಸೂಚಿಸುತ್ತದೆ ಎಂದು ವರದಿ ಬಹಿರಂಗಪಡಿಸಿದೆ.
ಸೆಲೆನಿಯಮ್ ಒಂದು ಪ್ರಕಾರದ ಖನಿಜವಾಗಿದ್ದು, ಅದು, ಮಣ್ಣು, ನೀರು ಮತ್ತು ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ. ದೇಹದಲ್ಲಿ ಚಯಾಪಯ ಕ್ರಿಯೆಯನ್ನು ನಿಯಂತ್ರಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇದು ಹೆಚ್ಚುವರಿ ಪ್ರಮಾಣವು ಆರೋಗ್ಯಕ್ಕೆ ಹಾನಿಕಾರವಾಗಿದೆ ಎಂದು ತಜ್ಞರು ಹೇಳುತ್ತಾರೆ.(ಏಜೆನ್ಸೀಸ್)