

ವಾಷಿಂಗ್ಟನ್: ಎಚ್1ಬಿ ಸಹಿತ ಕೆಲವು ವೀಸಾಗಳ ಸಂಸ್ಕರಣೆ ಶುಲ್ಕಗಳನ್ನು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್ಸಿಐಎಸ್) ಏರಿಸಿದೆ. ಈ ಕುರಿತ ಅಂತಿಮ ನಿಯಮವನ್ನು ಅದು ಪ್ರಕಟಿಸಿದೆ.
ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಕಂಪನಿಗಳು ಹೊಸ ಸಂಸ್ಕರಣೆ ಶುಲ್ಕವನ್ನು ಮುಂದಿನ ವರ್ಷದ ತಮ್ಮ ಬಜೆಟ್ನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಲಸೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ. ಸಾಮಾನ್ಯವಾಗಿ ಸಂಸ್ಕರಣೆಯು ಎಚ್1ಬಿ ವೀಸಾಕ್ಕೆ ಮಾರ್ಚ್ನಿಂದ ಸಲ್ಲಿಸಲಾಗುವ ಅರ್ಜಿಗಳ ಇ-ನೋಂದಣಿಯನ್ನು ಒಳಗೊಂಡಿರುತ್ತದೆ. ಅದರ ನಂತರ ಲಾಟರಿ ಎತ್ತಲಾಗುತ್ತದೆ ಹಾಗೂ ಆಯ್ಕೆಯಾದ ಲಾನುಭವಿಗಳಿಗೆ ಅಂತಿಮ ವೀಸಾ ಅರ್ಜಿ ನೀಡಲಾಗುತ್ತದೆ.
ವಲಸೆಯೇತರ ಕಾರ್ಮಿಕರಿಗಾಗಿ ಬಳಸುವ ಎಚ್1ಬಿ ಅಥವಾ ಎಲ್1 ವೀಸಾಗಳ ಅರ್ಜಿ ನಮೂನೆ ಐ&129ನ ಪ್ರೀಮಿಯಂ ಸಂಸ್ಕರಣೆ ಶುಲ್ಕವನ್ನು ಶೇ. 12ರಷ್ಟು ಏರಿಸಲಾಗಿದ್ದು ಅದು 2,805 ಡಾಲರ್ ಆಗುತ್ತದೆ. ಹೊಸ ಶುಲ್ಕ 2024ರ ೆಬ್ರವರಿ 26ರಿಂದ ಜಾರಿಗೆ ಬರಲಿದೆ.