ಕೊತಕೊತ ಕುದಿಯುವ ಬಿಸಿ ಎಣ್ಣೆಯನ್ನು ಪತಿಯ ಖಾಸಗಿ ಅಂಗದ ಮೇಲೆ ಎರಚಿದ ಪತ್ನಿ!

Gwalior Woman
Published on

ಮಧ್ಯಪ್ರದೇಶ: ಪರಪುರುಷನ ಜತೆ ಫೋನ್​ನಲ್ಲಿ ಮಾತನಾಡಬೇಡಾ ಅಂದಿದ್ದಕ್ಕೆ ಮಹಿಳೆಯೊಬ್ಬಳು ಪತಿಯ ಜನನಾಂಗದ ಮೇಲೆ ಕುದಿಯುವ ಎಣ್ಣೆಯನ್ನು ಎರಚಿದ್ದಾಳೆ.

ಸುನೀಲ್ ಧಾಕಡ್ (32) ಪತ್ನಿಯಿಂದ ಹಲ್ಲೆಗೊಳಗಾದ ವ್ಯಕ್ತಿ. ಈತನ ಪತ್ನಿ ಭಾವನಾ ಪರಾರಿಯಾಗಿದ್ದಾಳೆ. ಕಂಪು ಪ್ರದೇಶದ ಮಾಧ್ವಿ ನಗರದಲ್ಲಿ ಈ ಘಟನೆ ನಡೆದಿದೆ.

ಕಚೇರಿಗೆ ಹೋದ ನಂತರ ಹೆಂಡತಿ ನಂತರದ ಬೇರೆ ಯುವಕನ ಜತೆ ಮಾತನಾಡುತ್ತಿದ್ದಳು. ಪತಿ ತನ್ನ ಹೆಂಡತಿಗೆ ಹಲವು ಬಾರಿ ಬುದ್ಧಿ ಹೇಳಿದ್ದರು ಆಕೆ ಅರ್ಥಮಾಡಿಕೊಂಡಿರಲಿಲ್ಲ. ಒಂದು ದಿನ ಸುನೀಲ್ ಮನೆಗೆ ಬಂದಾಗ, ಭಾವನಾ ಮತ್ತೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವುದನ್ನು ನೋಡಿದನು. ಈ ವೇಳೆ ಸುನೀಲ್ ಭಾವನಾ ಕೈಯಿಂದ ಫೋನ್ ಕಸಿದುಕೊಂಡನು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸುನೀಲ್ ಗಾಢ ನಿದ್ದೆಯಲ್ಲಿದ್ದಾಗ ಭಾವನಾ ಅಡುಗೆ ಮನೆಗೆ ಹೋಗಿ ಬಿಸಿ ಎಣ್ಣೆ ತಂದು ಗಂಡನ ಮೇಲೆ ಸುರಿದಿದ್ದಾಳೆ.

ಸುನಿಲ್ ನೋವಿನಿಂದ ಕಿರುಚಲು ಪ್ರಾರಂಭಿಸಿದನು,ನೆರೆಹೊರೆಯವರು ಬಂದಿದ್ದಾರೆ. ಜನರು ಸುನೀಲ್ ನನ್ನು ಆಸ್ಪತ್ರೆಗೆ ದಾಖಲಿಸಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಸುತ್ತಮುತ್ತಲಿನ ಜನರ ಹೇಳಿಕೆಗಳ ಆಧಾರದ ಮೇಲೆ ಭಾವನಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net