ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ ಗುರುರಾಘವೇಂದ್ರ ಸಹಕಾರ ಬ್ಯಾಂಕ್​​ನ ಮಾಜಿ ಸಿಇಒ

Suicide
Published on

ಬೆಂಗಳೂರು: ಬಸವನಗುಡಿಯ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್​ ಸೊಸೈಟಿ ಮಾಜಿ ಸಿಇಒ ವಾಸುದೇವ್​ ಮಯ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಹಕಾರ ಬ್ಯಾಂಕ್​​ನಿಂದ ಸುಮಾರು 1400 ಕೋಟಿ ರೂಪಾಯಿ ಅವ್ಯವಹಾರವಾಗಿರುವುದು ಜೂ.18ರಂದು ಗೊತ್ತಾಗಿತ್ತು. ವಾಸುದೇವ್​ ಮಯ್ಯ ಹಾಗೂ ಬ್ಯಾಂಕ್​ ಅಧ್ಯಕ್ಷ ರಾಮಕೃಷ್ಣ ಅವರ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿತ್ತು.

ಇಂದು ಮಾಜಿ ಸಿಇಒ ವಾಸುದೇವ್​ ಮಯ್ಯ ಉತ್ತರಹಳ್ಳಿ ರಸ್ತೆ ಬದಿಯಲ್ಲಿ ಕಾರಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯಪುರ ಠಾಣೆಯ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಷ್ಟ್ರರಾಜಧಾನಿಯಲ್ಲಿ ಲಕ್ಷ ದಾಟಿದ ಕರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣದಲ್ಲೂ ಭರ್ಜರಿ ಏರಿಕೆ

ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್​ ಸೊಸೈಟಿಯ ಅವ್ಯವಹಾರದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಇತ್ತ ಎಸಿಬಿಯೂ ತನಿಖೆ ನಡೆಸುತ್ತಿದೆ.

ಸಹಕಾರ ಬ್ಯಾಂಕ್​ನ ಅವ್ಯವಹಾರದಲ್ಲಿ ಸಿಇಒ ವಾಸುದೇವ ಮಯ್ಯ ಮತ್ತು ಅಧ್ಯಕ್ಷ ರಾಮಕೃಷ್ಣ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಬಿಲ್ಡರ್​​ಗಳಿಗೆ ನೂರಾರು ಕೋಟಿ ರೂಪಾಯಿ ಸಾಲ ನೀಡಿ ಅವ್ಯವಹಾರ ಮಾಡಿದ್ದರು. ಅದಕ್ಕಾಗಿ ಅವರು ಪಡೆದ ದಾಖಲೆಗಳೆಲ್ಲ ಬೋಗಸ್​ ಆಗಿದ್ದವು. ಬ್ಯಾಂಕ್​ ಸಿಬ್ಬಂದಿ ಹೆಸರಲ್ಲಿ ನಕಲಿ ಅಕೌಂಟ್ ತೆರೆದು ನೂರಾರು ಕೋಟಿ ರೂಪಾಯಿ ಟ್ರಾನ್ಸ್​ಫರ್​ ಮಾಡಿದ್ದು, ಎಸಿಬಿ ದಾಳಿ ವೇಳೆ ಗೊತ್ತಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net