7 ಲಕ್ಷದ ಸಮೀಪ ಬಂತು ದೇಶದ ಕರೊನಾ ಸೋಂಕಿತರ ಸಂಖ್ಯೆ; ಪಾಸಿಟಿವಿಟಿ ದರ ಶೇ.6.73

Corona India
Published on

ನವದೆಹಲಿ: ದೇಶದಲ್ಲಿ ಕಳೆದ 24ಗಂಟೆಯಲ್ಲಿ 24,248 ಕರೊನಾ ಕೇಸ್​​ಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 7 ಲಕ್ಷದ ಸಮೀಪ ಬಂದಿದೆ. ಭಾರತದ ಕರೊನಾ ಸೋಂಕಿತರ ಸಂಖ್ಯೆ ಸದ್ಯ 6,97, 413ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಸದ್ಯ ದೇಶದಲ್ಲಿ ಸಕ್ರಿಯ ಕರೊನಾ ಪ್ರಕರಣಗಳ ಸಂಖ್ಯೆ 2,53,287 ಇದ್ದು, 4,24432 ಮಂದಿ ಗುಣಮುಖರಾಗಿ ಡಿಸ್​​ಚಾರ್ಜ್​ ಆಗಿದ್ದಾರೆ. ಹಾಗೇ ಕಳೆದ 24 ಗಂಟೆಯಲ್ಲಿ 425 ಮಂದಿ ಸಾವನ್ನಪ್ಪಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 19, 693ಕ್ಕೆ ಏರಿದೆ.

ಈ ಮಧ್ಯೆ ಕರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಪಾಸಿಟಿವಿಟಿ ದರ ಶೇ.6.73ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net