ಗುರುಪ್ರಸಾದ್ ಪರಿಸರ ವೌಲ್ಯಮಾಪನ ಪ್ರಾಧಿಕಾರ ಅಧ್ಯಕ್ಷ

guruprasad
ಬಿ.ಗುರುಪ್ರಸಾದ್
Published on

ಕಡೂರು: ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರ ಅಧ್ಯಕ್ಷರನ್ನಾಗಿ ತಾಲೂಕಿನ ಬಳ್ಳೇಕೆರೆ ಗ್ರಾಮದ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಗುರುಪ್ರಸಾದ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿ, ಮೆಟ್ರೋ ಮತ್ತು ಏರ್‌ಪೋರ್ಟ್ ಅಭಿವೃದ್ಧಿಗಾಗಿ ಬಿ.ಗುರುಪ್ರಸಾದ್ ಸಲ್ಲಿಸಿದ ಸೇವೆ ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಳಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿಸಿ ಆದೇಶ ಹೊರಡಿಸಿದ್ದು ಕೇಂದ್ರದ ಗೆಜೆಟಿಯರ್‌ನಲ್ಲಿ ಪ್ರಕಟವಾಗಿದೆ. ಪ್ರಾಧಿಕಾರದ ಸದಸ್ಯರಾಗಿ ಎಚ್.ಎಂ.ಲಕ್ಷ್ಮೀಕಾಂತ ನೇಮಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net