

ಗುರುಗ್ರಾಮ್: ಚಲಿಸುತ್ತಿದ್ದ ಕಾರಿನ ಮೇಲೆ ಪುಷ್-ಅಪ್ಸ್ ಮಾಡಿದ ಯುವಕನನ್ನು ಬಂಧಿಸಿರುವ ಘಟನೆ ದೆಹಲಿ ಬಳಿಯ ಗುರುಗ್ರಾಮ್ನಲ್ಲಿ ನಡೆದಿದೆ.
ದೃಶ್ಯದಲ್ಲಿ ಏನಿದೆ?
ನಡುರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಛಾವಣಿಯ ಮೇಲೆ ವ್ಯಕ್ತಿಯೊರ್ವ ಪುಷ್-ಅಪ್ ಮಾಡುತ್ತಿರುವುದರ ಜತೆಗೆ ಇಬ್ಬರು ಸ್ನೇಹಿತರು ತಮ್ಮ ದೇಹವನ್ನು ಹೊರಹಾಕಿ ಡಾನ್ಸ್ ಮಾಡುವುದನ್ನು ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ತಕ್ಷಣವೇ ಕ್ರಮಕೈಗೊಂಡು ಅಕ್ರಮಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡು ಆರೋಪಿ ಲೋಕೇಶ್ನನ್ನು ಬಂಧಿಸಿದ್ದಾರೆ ಹಾಗೂ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ 6,500 ರೂ.ದಂಡವನ್ನು ವಿಧಿಸಿದ್ದಾರೆ.
ಇನ್ನು, ಈ ಕುರಿತು ಮಾತನಾಡಿದ ನಗರ ಸಂಚಾರ ಪೊಲೀಸರು, ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ. ಮತ್ತು ಇತರರ ಪ್ರಾಣಕ್ಕೆ ಅಪಾಯವನ್ನುಂಟು ಮಾಡದಂತೆ ವಾಹನ ಚಲಾಯಿಸಿ ಎಂದು ವಿನಂತಿಸಿಕೊಂಡಿದ್ದಾರೆ.(ಏಜೆನ್ಸೀಸ್)