ಕುದಿಯುವ ಹಾಲನ್ನು ಮಗಳ ಮೇಲೆ ಸುರಿದ ತಂದೆ!; ಮುಂದೇನಾಯ್ತು..?

boiling milk
Published on

ಗುರುಗ್ರಾಮ: ತಂದೆಯೊಬ್ಬ 9 ವರ್ಷದ ಮಗಳಿಗೆ ಹಿಗ್ಗಾಮುಗ್ಗ ಥಳಿಸಿ ಕುದಿಯುವ ಹಾಲನ್ನು ಆಕೆಯ ಮೇಲೆ ಸುರಿದಿದ್ದಾನೆ. ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಭೋಂಡ್ಸಿ ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳನ್ನು ಥಳಿಸಿದ್ದಾನೆ. ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ ಆಕೆಯ ಪತಿ ವಿರುದ್ಧ ಬುಧವಾರ ಭೋಂಡ್ಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪತ್ನಿಯೊಂದಿಗೆ ಜಗಳವಾಡಿದ ನಂತರ ತಮ್ಮ ಒಂಬತ್ತು ವರ್ಷದ ಮಗಳ ಮೇಲೆ ಕುದಿಯುವ ಹಾಲನ್ನು ಸುರಿದು ಹಾಲಿನ ಪಾತ್ರೆಯಿಂದ ಹೊಡೆದು ಆಕೆಯ ತಲೆಬುರುಡೆಗೆ ಹೊಡೆದಿದ್ದಾನೆ. ಬಾಲಕಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಸಾವು ಬದುಕಿನ ಮಧ್ಯೆ ಹೊರಾಟ ನಡೆಸುತ್ತಿದ್ದಾಳೆ. ಏಪ್ರಿಲ್ 19 ರಂದು ಈ ಘಟನೆ ನಡೆದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸದೆ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ.

ನನ್ನ ಪತಿ ನನಗೆ ಮತ್ತು ನನ್ನ ಮಗಳಿಗೆ ಥಳಿಸಿದರು. ನನ್ನ ಮಗಳ ಮೇಲೆ ಬಿಸಿ ಹಾಲನ್ನು ಎಸೆದರು. ನನ್ನ ಮಗಳಿಗೆ ಗಂಭೀರವಾದ ಸುಟ್ಟಗಾಯಗಳು ಮತ್ತು ತಲೆಗೆ ಗಾಯಗಳಾಗಿವೆ. ನನ್ನ ತಂದೆ ಪೊಲೀಸ್ ಸಹಾಯಕ್ಕಾಗಿ 112 ಗೆ ಡಯಲ್ ಮಾಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ದೂರು ದಾಖಲಿಸಿದ ನನ್ನ ತಂದೆಯ ಒಪ್ಪಿಗೆ ಪಡೆಯದೆ ನನ್ನ ಪತಿಯೊಂದಿಗೆ ಕೆಲವರು ವ್ಯವಹಾರ ನಡೆಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಬಾಲಕಿಯ ಸಿಟಿ ಸ್ಕ್ಯಾನ್ ವರದಿಯಲ್ಲಿ ಆಕೆಗೆ ಮೂಳೆ ಮುರಿತ ಕಂಡುಬಂದಿದೆ. ಮೂಳೆಯು ತಲೆಬುರುಡೆಯ ಹಿಂಭಾಗ ಮತ್ತು ಬೆನ್ನುಹುರಿಯ ಸಂಪರ್ಕಿಸುವ ಮೂಳೆಯಾಗಿದೆ. ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ ತಂದೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿ ತಂದೆಗಾಗಿ ಹುಡುಕಾಟ ಮಾಡುತ್ತಿದ್ದೇವೆಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net