More

    ‌ಮೋದಿ ಕಾಲದಲ್ಲಿ ಒಂದೂ ಹಗರಣವಾಗಿಲ್ಲ…ಕಾಂಗ್ರೆಸ್ ಸರ್ಕಾರದಲ್ಲಿ ಹಗರಣ ಬಿಟ್ಟು ಬೇರೇನು ಆಗಿಲ್ಲ : ವಿಜಯ ಸಂಕೇಶ್ವರ ಹೇಳಿಕೆ

    ಗದಗ: ಪ್ರಧಾನಿ ನರೇಂದ್ರ ‌ಮೋದಿಯವರ ಕಾಲದಲ್ಲಿ ಒಂದೂ ಹಗರಣವಾಗಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರದ 55 ವರ್ಷದ ಆಡಳಿತಾವಧಿಯಲ್ಲಿ ಹಗರಣ ಬಿಟ್ಟು ಬೇರೆ ಏನೂ ಆಗಿಲ್ಲ ಎಂದು ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಕಾಂಗ್ರೆಸ್​​ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

    ಗದಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷದ ಆಚರಣೆ ಮಾಡ್ತಾಇದ್ದೇವೆ. 55 ವರ್ಷ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ದೇಶ ಹಿಂದೆ ಹೋಗಲು ಕಾರಣವಾಯಿತು. ಕಳೆದ ಒಂಬತ್ತು ವರ್ಷದಿಂದ ಮೋದಿಯವರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.

    ಕಾಂಗ್ರೆಸ್ ಆಡಳಿತ ಅವಧಿ ಮುಗಿದ ‌ಮೇಲೆ‌ ಮೋದಿಯವ್ರು ಅಧಿಕಾರವನ್ನು ತೆಗೆದುಕೊಂಡರು. ಕಾಂಗ್ರೆಸ್​​ನವರು ಆಯಿಲ್, ಪೆಟ್ರೋಲ್ ಕಚ್ಚಾ ತೈಲದ ಪೇಮೆಂಟ್ ಮಾಡಿರಲಿಲ್ಲ. ವಿದೇಶದವರು ಪೂರೈಕೆ ಬಂದ್ ಮಾಡಿದ್ದರು. ಮೋದಿಯವರು ಪ್ರಧಾನಿಯಾದ ಮೇಲೆ ಧಾವಿಸಿ ಹೋಗಿ ಮನವಿ ಮಾಡಿಕೊಳ್ಳುತ್ತಾರೆ. “ಕಾಂಗ್ರೆಸ್ ಸರ್ಕಾರದ ಬಾಕಿ ಇರುವ ಪೇಮೆಂಟ್ ಕೊಡುತ್ತೇವೆ. ಮುಂದೆ ನಾವು ದುಡ್ಡು ಕೊಟ್ಟು, ಆಯಿಲ್‌ ತೆಗೆದುಕೊಂಡು ಹೋಗುತ್ತೇವೆ ಸಪ್ಲೈ ಮಾಡಿ” ಎಂದು ಕಳಕಳಿಯಿಂದ ವಿನಂತಿ ಮಾಡಿಕೊಂಡರು. ನಂತರ ದೇಶವನ್ನು ಮುನ್ನಡೆಸಲು ಆರಂಭ ಮಾಡಿದ್ದಾರೆ ಎಂದು ಮೋದಿ ಅವರ ಆಡಳಿತಾವಧಿ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಪ್ರಧಾನಿ ನರೇಂದ್ರ ‌ಮೋದಿಯವರ ಕಾಲದಲ್ಲಿ ಒಂದೂ ಹಗರಣವಾಗಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ 55 ವರ್ಷದಲ್ಲಿ ಹಗರಣ ಬಿಟ್ಟು ಬೇರೆ ಏನ್ನೂ ಆಗಿಲ್ಲ. ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ನಮ್ಮ‌ ದೇಶ ಬಹಳ ಹಿಂದೆ ಉಳಿದಿತ್ತು. ನಮ್ಮ ದೇಶಕ್ಕೆ ಆಗ ಯಾವುದೇ ಕಿಮ್ಮತ್ತು ಇರಲಿಲ್ಲ ಎಂದು ಕಾಂಗ್ರೆಸ್​​ ವಿರುದ್ಧ ಗುಡುಗಿದ್ದಾರೆ.

    ಇದನ್ನೂ ಓದಿ: ಮಕ್ಕಳ ಪರೀಕ್ಷೆ ಬಗ್ಗೆ ಮೋದಿಗೆ ಕಾಳಜಿ, ಅವರ ಸೂಚನೆಯಂತೆ ರೋಡ್ ಶೋನಲ್ಲಿ‌ ಬದಲಾವಣೆ: ಶೋಭಾ ಕರಂದ್ಲಾಜೆ

    ಮೋದಿಯವರ ಶಿಸ್ತುಬದ್ಧವಾದ ಆಡಳಿತವನ್ನು ನೋಡಿ ದೇಶ, ವಿದೇಶಗಳಲ್ಲಿ ಸರ್ವ ಶ್ರೇಷ್ಠ ನಾಯಕ ಎಂದು ಗುರುತಿಸಲಾಗಿದೆ. ಆರ್ಥಿಕವಾಗಿ ಅನೇಕ ರಾಷ್ಟ್ರಗಳು, ಸಂಕಷ್ಟದಲ್ಲಿವೆ, ಭಾರತ ಮಾತ್ರ ಪ್ರಗತಿಪಥದಲ್ಲಿದೆ. ಮುಂದುವರಿದ ದೇಶಗಳನ್ನು ಹಿಮ್ಮೆಟ್ಟಿ ಐದನೇ ಸ್ಥಾನಕ್ಕೆ ಬಂದಿದ್ದೇವೆ. ಮುಂದಿನ ನಾಲ್ಕೈದು ವರ್ಷಕ್ಕೆ ಒಂದನೇ ಸ್ಥಾನಕ್ಕೆ ಹೋಗುತ್ತೇವೆಂದು ಹೇಳಿದ್ದಾರೆ.

    ಸಿದ್ದರಾಮಯ್ಯನವರ ಸರ್ಕಾರದಲ್ಲಿ ದುರಾಡಳಿತ ಅವ್ಯವ್ಯವಹಾರ ನಡೆಯಿತು. ಕರ್ನಾಟಕದಲ್ಲಿ ಈವರಿಗೆ ಅನೇಕ ಸಿಎಂಗಳು ಬಂದು ಹೋಗಿದ್ದಾರೆ. ಎಲ್ಲಾ ಸಿಎಂಗಳು ಸೇರಿ, 80 ಸಾವಿರ ಕೋಟಿ ಎಷ್ಟು ಸಾಲ ಮಾಡಿದ್ದಾರೆ. ಆದ್ರೆ ಸಿದ್ದರಾಮಯ್ಯನವರು ಐದು ವರ್ಷದಲ್ಲಿ 1 ಲಕ್ಷ 48 ಸಾವಿರ ಕೋಟಿ ಸಾಲವನ್ನು ಮಾಡಿದ್ದಾರೆ. ಸಾಕಷ್ಟು ಅವ್ಯವ್ಯಹಾರ ಮಾಡಿ, ರಾಜ್ಯವನ್ನು ಕನಿಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು ಎಂದು ಕಾಂಗ್ರೆಸ್​​ ಸರ್ಕಾರ ಅವಧಿಯ ಕುರಿತಾಗಿ ಕಿಡಿಕಾರಿದ್ದಾರೆ.

    ರಾಜ್ಯದ ಜನತೆ ಬಿಜೆಪಿಗೆ ಪೂರ್ಣ ಪ್ರಮಾಣದ ಆಶೀರ್ವಾದ ಮಾಡಲ್ಲಿಲ್ಲ. ಹೀಗಾಗಿ ಅನೇಕ ರಾಜಕೀಯ ಬದಲಾವಣೆಗಳು ಆಗಿವೆ. ಮುಂದೆ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ರೀತಿಯಲ್ಲಿ ಪ್ರಗತಿಯಲ್ಲಿ ರಾಜ್ಯ ಮುನ್ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳಿದ್ದಾರೆ.

    ಗದಗ ಕ್ಷೇತ್ರದಿಂದ ಅನಿಲ್‌ ಮೆಣಸಿನಕಾಯಿ ಎರಡು ಬಾರಿ ಸ್ಪರ್ಧೆ ಮಾಡಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಕಂಡರು. ಇವತ್ತು ಕೇಂದ್ರ ಹಾಗೂ ರಾಜ್ಯದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ದುಡ್ಡು ಹರಿದು ಬರುತ್ತಿದೆ. ದೇಶದಲ್ಲಿ ಈ ಹಿಂದೆ ಎಲ್ಲಾ ಕಾಂಟ್ರಾಕ್ಟರ್​​ಗಳು ಓಡಿ ಹೋಗಿದ್ರು, ನಿತಿನ್ ಗಡ್ಕರಿಯವರು ಎಲ್ಲರನ್ನು ಕರೆದು ಸಭೆ ಮಾಡಿ, ಈ ಹಿಂದೆ ಬಾಕಿ ಇರೋ ಪೇಮೆಂಟ್ ಕೊಡುತ್ತೇವೆಂದ ನಂತರ ಹೈವೆ ಸಾಕಷ್ಟು ಅಭಿವೃದ್ಧಿ ಆಗಿವೆ ಎಂದಿದ್ದಾರೆ.

    ಇದನ್ನೂ ಓದಿ: 68ನೇ ವಯಸ್ಸಿನಲ್ಲಿ ಮದ್ವೆ ಆಸೆಗೆ ಬಿದ್ದ ವೃದ್ಧನಿಗೆ ಶಾಕ್​! ತನಿಖೆ ವೇಳೆ ಕಿಲಾಡಿ ಲೇಡಿಯ ಕರಾಳತೆ ಬಯಲು

    ಮೋದಿ ಪ್ರಧಾನಿಯಾದ ಮೇಲೆ ವಿದ್ಯುತ್ ಕೊರತೆ ಉಂಟಾಗಿತ್ತು. ಇವತ್ತು ದೇಶದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡ್ತಾಇದ್ದೇವೆ. ನಮ್ಮ ದೇಶದಿಂದ ಈವಾಗ ವಿದ್ಯುತ್ ರಫ್ತು ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ  ಉತ್ತಮ ಕೆಲಸ ಮಾಡುತ್ತಿವೆ. ಬಿಎಸ್​​ವೈ ಹಾಗೂ ಬಸವರಾಜ ಬೊಮ್ಮಾಯಿ‌ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಕಾಂಗ್ರೆಸ್​​ನವರು ಜಾತಿಯನ್ನು ಒಡೆಯುವ ಬೆಂಕಿ ಹಚ್ಚಿದರು. ಮೀಸಲಾತಿ ಬಗ್ಗೆ ಅನೇಕ ತಪ್ಪು ತಿಳಿವಳಿಕೆಗಳನ್ನು ನೀಡಿದರು. ವೀರಶೈವ ಒಳಪಂಗಡದಲ್ಲಿ, ಜಗಳವನ್ನು ಹಚ್ಚಿದಾಗ ಸಮಸ್ಯೆ ಬಗೆ ಹರಿಯುವುದಿಲ್ಲ ಎನ್ನುವ ರಾಜಕೀಯ ವಿಶ್ಲೇಷಣೆ ಇತ್ತು. ಆದರೆ ಚಾಣಾಕ್ಷ ಬಸವರಾಜ ಬೊಮ್ಮಾಯಿ‌ ಅವ್ರು, ಬೆಣ್ಣೆ ಒಳಗಿನ ಕೂದಲು ತೆಗೆಯುವ ಹಾಗೆ ಈ ರೀತಿ ಬಹಳ‌ ಸರಳವಾಗಿ ಮೀಸಲಾತಿ ನೀಡಿದ್ರು. ಎಲ್ಲ ವರ್ಗದವರಿಗೆ ಹೊಸ ಮೀಸಲಾತಿ ನೀಡಿದ್ದರು. ನನಗೂ ಕೂಡ ಮೊದಲು ಬೊಮ್ಮಾಯಿ‌ ಅವರ ಮೇಲೆ ಭರವಸೆ ಇರಲಿಲ್ಲ. ಆದ್ರೆ ಎಲ್ಲರೂ ಮೆಚ್ಚುವ ಹಾಗೇ ತೃಪ್ತಿಪಡುವ ಹಾಗೇ ಮೀಸಲಾತಿ ಸಮಸ್ಯೆ ಬಗೆಹರಿಸಿದ್ದಾರೆ. ಕರ್ನಾಟಕದ ಜನತೆ ಹಾಗೂ ಗದಗ ಕ್ಷೇತ್ರದ ಜನರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ರಾಜ್ಯದಲ್ಲಿ 150 ಸ್ಥಾನಗಳು ಬರೋದು ಗ್ಯಾರಂಟಿಯಾಗಿದೆ. ಈ ಬಾರಿ ಗದಗ ಕ್ಷೇತ್ರದ ಅನಿಲ್ ಮೆಣಸಿನಕಾಯಿ ಇದ್ರೆ ಹೆಚ್ಚು ಅಭಿವೃದ್ಧಿಗೆ ಸಾಹಯವಾಗುತ್ತದೆ. ನಾನು ಗದಗ ಪಟ್ಟಣವನ್ನು 60 ವರ್ಷದಿಂದ ನೋಡುತ್ತಿದ್ದೇನೆ. ಎಚ್ ಕೆ ಪಾಟೀಲ್ ಅವರ ತಂದೆ ಕೆ ಎಚ್ ಪಾಟೀಲ್ ಅವರು 6 ತಿಂಗಳಲ್ಲಿ ನೀರಿನ ಸಮಸ್ಯೆ ಬಗೆ ಹರಿಸುತ್ತೇನೆ ಅಂತಾ ಹೇಳಿದ್ರು, ಆದರೆ 60 ವರ್ಷದಿಂದ ತಂದೆ ಮಕ್ಕಳಿಗೆ ಗದಗ ನೀರಿನ ಸಮಸ್ಯೆ ಬಗೆಹರಿಸುವ ಕಾಳಜಿ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

    ಇದನ್ನೂ ಓದಿ: ಏರ್‌ಪೋರ್ಟ್‌ ಗೇಟ್‌ನಲ್ಲೇ ಮಹಿಳೆಯರ ಬಟ್ಟೆ ಬಿಚ್ಚಿಸಿದ ಏರ್‌ಲೈನ್ಸ್‌ ಸಿಬ್ಬಂದಿ!: ಕಾರಣವೇನು ಗೊತ್ತಾ?

    ತುಂಗಭದ್ರಾ ನೀರು ಬರುವಾಗ, ನಮಗೆ ಸಾಕಷ್ಟು ಆಸೆ ಇದ್ದವು. 24 ಗಂಟೆ ನೀರು ಸಿಗುತ್ತೆ. ಆದ್ರೆ ಸ್ಥಳೀಯ ಶಾಸಕರ ಅವ್ಯವಹಾರದಿಂದ ಕಳಪೆ ಮಟ್ಟದ ಕೆಲಸವಾಗಿದೆ. ಹೀಗಾಗಿ 10 ದಿನಕ್ಕೆ ಒಂದು ಬಾರಿ ನೀರು ಬರುವ ಸ್ಥಿತಿ ಬಂದಿದೆ. 60 ವರ್ಷದ ಹಿಂದೆ ಇರುವ ದುಸ್ಥಿತಿಯಲ್ಲಿದ್ದೇವೆ. ಸಮಸ್ಯೆ ಹೇಳಿಕೊಳ್ಳಬೇಕು. ಬೆಂಗಳೂರು ಹಾಗೂ ಹುಲಕೋಟಿ ಬೇರೆಡೆ ನಿಮ್ಮ ಶಾಸಕರು ಸಿಗೋದಿಲ್ಲ. ಗದಗ, ಇತರೆ ಹಳ್ಳಿಗಳ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ ಎನ್ನುವುದು, ಕಳೆದ 50 ವರ್ಷಗಳಿಂದ ಎಲ್ಲರಿಗೂ ಮನವರಿಕೆಯಾಗಿದೆ. ಗದಗಕ್ಕೆ ಕೂಡ ಬೇರೆ ಪಟ್ಟಣಗಳ ಹಾಗೆ, ಎಲ್ಲ ಸೌಲಭ್ಯ ಸಿಗುವಂತೆ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ನುಡಿದಿದ್ದಾರೆ.

    “ಕಾಂಗ್ರೆಸ್ ಕೇಂದ್ರ ಹಾಗೂ ಅನೇಕ ರಾಜ್ಯದಲ್ಲಿ ಅಸ್ತಿತ್ವನ್ನು ಕಳೆದುಕೊಂಡಿದೆ. ರಾಜ್ಯದಲ್ಲಿ ಕೂಡಾ ಕಾಂಗ್ರೆಸ್ ದಯನೀಯ ಸೋಲು ಅನುಭವಿಸುತ್ತದೆ. ಅನಿಲ್ ಮೆಣಸಿನಕಾಯಿ ಅವರಿಗೆ ಹೆಚ್ವಿನ ಮತ ಹಾಕಿ ಗೆಲ್ಲಿಸಬೇಕು ಅಂತಾ ಮನವಿ ಮಾಡಿಕೊಳ್ಳುತ್ತೇನೆ” ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

    VIDEO| ಬೈಕ್​​ ಮೇಲೆ ಕುಳಿತು ಪರಸ್ಪರ ಅಪ್ಪಿಕೊಂಡು ಲಿಪ್​ಲಾಕ್​ ​​ಮಾಡಿದ ಹುಡುಗಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts