ಗುರುಭವನಕ್ಕೆ ಬೆಂಕಿ ತಗುಲಿ ದಾಖಲೆ ನಾಶ

gurubhavana fire
ಬೀರೂರಿನ ಗುರುಭವನದಲ್ಲಿ ಬೆಂಕಿ ತಗುಲಿ ದಾಖಲೆಗಳು ಸುಟ್ಟು ಕರಕಲಾಗಿರುವುದು.
Published on

ಬೀರೂರು: ಬೀರೂರಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಶಿಕ್ಷಕರ ಗುರುಭವನಕ್ಕೆ ಶನಿವಾರ ರಾತ್ರಿ ಬೆಂಕಿ ತಗುಲಿ ಸಾಕಷ್ಟು ದಾಖಲೆಗಳು ಆಹುತಿಯಾಗಿವೆ.

ಗುರುಭವನದ ಹಿಂಭಾಗದಲ್ಲಿರುವ ಬಿಇಒ ಕಚೇರಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಗುರುಭವನದ ಒಂದು ಕೋಣೆಯಲ್ಲಿ ಇರಿಸಲಾಗಿತ್ತು. ರಾತ್ರಿ 10.30ಕ್ಕೆ ಬೆಂಕಿ ತಗುಲಿ ದಾಖಲೆಗಳು ಭಸ್ಮವಾಗಿವೆ. ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದ ಸ್ಥಳೀಯರು ತಕ್ಷಣವೇ ಕಡೂರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆದರು. ಬೆಂಕಿ ತಗುಲಿದ್ದು ಹೇಗೆ ಎಂಬುದು ಗೊತ್ತಾಗಿಲ್ಲ. ಬೀರೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net