

ಗುಂಟೂರು: ಹಣದ ಆಮಿಷವೊಡ್ಡಿ ಅಮಾಯಕ ಹೆಣ್ಣು ಮಕ್ಕಳ ಬೆತ್ತಲೆ ಪೂಜೆ ಮಾಡಿದ್ದಲ್ಲದೆ, ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಆಂಧ್ರ ಪ್ರದೇಶದ ಗುಂಟೂರು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಹೆಣ್ಣು ಮಕ್ಕಳನ್ನೇ ದುರುಳರು ಗುರಿಯಾಗಿರಿಸಿಕೊಂಡಿದ್ದರು. ಗುಂಟೂರು ಜಿಲ್ಲೆಯ ತಾತಿಕೊಂಡ ಮಂಡಲದ ಪೊನ್ನೆಕಾಲು ಗ್ರಾಮದ ಪೂಜಾರಿ ನಾಗೇಶ್ವರ್ ರಾವ್ ಎಂಬಾತ ಬೆತ್ತಲೆ ಪೂಜೆ ನಡೆಸುತ್ತಿದ್ದರು. ಬಿಸಿನೆಸ್ನಲ್ಲಿ ನಷ್ಟ ಅನುಭವಿಸಿದ್ದ ಚಿಲಕಲುರಿಪೇಟೆ ಮೂಲದ ಅರವಿಂದ ಹೆಸರಿನ ಮಹಿಳೆಯನ್ನು ಸಾಮಾಜಿಕ ಜಾಲತಾಣ ಮೂಲಕ ನಾಗೇಶ್ವರ್ ರಾವ್ ಪರಿಯಿಸಿಕೊಂಡಿದ್ದ.
ಬಿಸಿನೆಸ್ ನಷ್ಟದಿಂದ ಆದ ನೋವನ್ನು ನಾಗೇಶ್ವರ್ ಬಳಿ ಅರವಿಂದ ಹೇಳಿಕೊಂಡಿದ್ದಳು. ನಿಧಿಯನ್ನು ಪತ್ತೆಹಚ್ಚುವ ಮೂಲಕ ಸುಲಭವಾಗಿ ಹಣ ಮಾಡಬಹುದು ಎಂದು ನಾಗೇಶ್ವರ್ ಹೇಳಿದ್ದ. ಆದರೆ, ಅಕ್ಕದೆ, ಯುವತಿಯರ ಬೆತ್ತಲೆ ಪೂಜೆ ಮಾಡಬೇಕಾಗುತ್ತದೆ ಎಂದಿದ್ದ. ಬಳಿಕ ನಾಗೇಶ್ವರ್ ಮತ್ತು ಅರವಿಂದ, ನಾಗೇಂದ್ರ ಹೆಸರಿನ ವ್ಯಕ್ತಿಯನ್ನು ಸಂಪರ್ಕಿಸಿ, ಪೂಜೆಯಲ್ಲಿ ಬೆತ್ತಲೆಯಾಗಿ ಕುಳಿತರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು.
ಇದಾದ ಬಳಿಕ ನಾಗೇಂದ್ರ ತನ್ನ ಸ್ನೇಹಿತ ಸುರೇಶ್ ಜತೆ ಸೇರಿಕೊಂಡು ನಂದ್ಯಾಲ ಜಿಲ್ಲೆಯ ಇಬ್ಬರು ಬಡ ಯುವತಿಯರನ್ನು ಸಂಪರ್ಕಿಸಿ, ಹಣದ ಆಮಿಷವೊಡ್ಡಿ ಬೆತ್ತಲೆ ಪೂಜೆಗೆ ಒಪ್ಪಿಸಿದ್ದರು. ಇದಾದ ಬಳಿಕ ನಾಗೇಶ್ವರ್ ನೇತೃತ್ವದಲ್ಲಿ ಬೆತ್ತಲೆ ಪೂಜೆ ನಡೆದಿತ್ತು. ಇದಾದ ಬಳಿಕ ಪೂಜಾರಿ ಮತ್ತು ಅವರ ಸಂಗಡಿಗರು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.
ದಿಶಾ ಆ್ಯಪ್ ಮೂಲಕ ದೂರು
ನಂತರ ಕಾರಿನಲ್ಲಿ ಯುವತಿಯರನ್ನು ಕರೆದುಕೊಂಡು ಗುಂಟೂರು ಕಡೆಗೆ ಆರೋಪಿಗಳು ತೆರಳಿದರು. ಗೋರಂಟ್ಲಾ ಬಳಿ ಕಾರು ಬಂದಾಗ ಸಂತ್ರಸ್ತ ಯುವತಿಯರು ಹೇಗೋ ತಪ್ಪಿಸಿಕೊಂಡು ದಿಶಾ ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ನಲ್ಲಪಾಡು ಪೊಲೀಸರು ಸ್ಥಳಕ್ಕಾಗಮಿಸಿ ಪೂಜಾರಿ ನಾಗೇಶ್ವರ್ ರಾವ್ ಹಾಗೂ ಆತನ ಸಂಗಡಿಗರು ಸೇರಿದಂತೆ 12 ಮಂದಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)