'ಗುಂಟೂರು ಕಾರಂ' ಚಿತ್ರದಿಂದ ನಟಿ ಪೂಜಾ ಹೆಗ್ಡೆ ಔಟ್​​, ಮೀನಾಕ್ಷಿ ಚೌಧರಿ ಇನ್​​?

Untitled design (60)
Published on

ಆಂಧ್ರಪ್ರದೇಶ: ಪ್ರಿನ್ಸ್​ ಮಹೇಶ್​​ ಬಾಬು ಅವರ ಬಹುನಿರೀಕ್ಷಿತ 'ಗುಂಟೂರು ಕಾರಂ' ಸಿನಿಮಾದ ನಾಯಕಿ ಬದಲಾವಣೆ ಕುರಿತು ಇದೀಗ ಟಾಲಿವುಡ್​​ ಅಂಗಳದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಮಹೇಶ್ ಬಾಬು ಅವರ 'ಗುಂಟೂರು ಕಾರಂ' ಚಿತ್ರಕ್ಕೆ ನಟಿ ಪೂಜಾ ಹೆಗ್ಡೆ ಅವರು ಪ್ರಿನ್ಸ್​​ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಇದೀಗ ಪೂಜಾ ಬದಲಿಗೆ ಮೀನಾಕ್ಷಿ ಚೌಧರಿ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂಬುದು ಅಧಿಕೃತವಾಗಿ ದೃಢಪಟ್ಟಿರುವುದು ಸಿನಿಪ್ರೇಕ್ಷಕರಿಗೆ ಶಾಕ್​ ನೀಡಿದೆ. ಮೊದಲಿಗೆ ಚಿತ್ರದ ಹೀರೋಯಿನ್​​ ಪೂಜಾ ಹಗ್ಡೆ ಎಂದೇ ಪರಿಗಣಿಸಲಾಗಿತ್ತು. ಆದ್ರೆ, ಇತ್ತೀಚೆಗೆ ನಟಿ ಮೀನಾಕ್ಷಿ ತಾವು ಗುಂಟೂರು ಕಾರಮ್‌ ಚಿತ್ರದ ಭಾಗವಾಗಿರುವುದಾಗಿ ಸ್ಪಷ್ಟಪಡಿಸಿದ ಬಳಿಕವೇ ಈ ಸಂಗತಿ ಖಚಿತವಾಗಿದೆ.

ಇದರ ಜತೆಗೆ ಈಗಾಗಲೇ ತಮ್ಮ ಮೊದಲ ಶೆಡ್ಯೂಲ್ ಕೂಡ ಮುಗಿಸಿಕೊಂಡಿರುವ ನಟಿ ಮೀನಾಕ್ಷಿ, ಕಳೆದ ಬಾರಿ ಹತ್ಯಾ ಚಿತ್ರದ ಈವೆಂಟ್​​ನಲ್ಲಿ ಈ ರೀತಿ ಹೇಳಿದರು. "ನಾನು ಎಂದಿಗೂ ಮಹೇಶ್ ಬಾಬು ಅವರ ದೊಡ್ಡ ಅಭಿಮಾನಿ. ನಾವು ಮೊದಲ ಶೆಡ್ಯೂಲ್ ಅನ್ನು ಮುಗಿಸಿದ್ದೇವೆ ಮತ್ತು ನನ್ನ ಪ್ರಥಮ ದಿನದ ಮೊದಲ ಶಾಟ್ ಮಹೇಶ್ ಬಾಬು ಗಾರು ಅವರೊಂದಿಗೆ. ಇದಕ್ಕೆ ನನ್ನ ಕೃತಜ್ಞತೆಗಳು" ಎಂದು ತಿಳಿಸಿದ್ದಾರೆ.

ಸದ್ಯದ ವರದಿ ಪ್ರಕಾರ ಈ ಚಿತ್ರದಲ್ಲಿ ಶ್ರೀಲೀಲಾ ನಂತರ ಎರಡನೇ ನಟಿಯಾಗಿ ಮೀನಾಕ್ಷಿ ಕಾಣಿಸಿಕೊಳ್ಳಲಿದ್ದಾರೆ. ಈ ಮುಖೇನ ಪೂಜಾ ಹೆಗ್ಡೆ ಬದಲಿಗೆ ನಟಿ ಮೀನಾಕ್ಷಿ ತೆರೆಯ ಮೇಲೆ ಮಿಂಚಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net