More

    ವಿಕ್ಟರಿ ವೆಂಕಟೇಶ್​​ ಚಿತ್ರದಲ್ಲಿ ಬೇಬಿ ಸಾರಾ ಎಂಟ್ರಿ!; ‘ಸೈಂಧವ್’ ಸಿನಿಮಾಗೆ ಫ್ಯಾನ್ಸ್​ ಕಾತರ

    ಆಂಧ್ರಪ್ರದೇಶ: ಟಾಲಿವುಡ್​​ ಅಂಗಳದಲ್ಲಿ ವಿಕ್ಟರಿ ವೆಂಕಟೇಶ್​ ಅವರ ಚಿತ್ರ ಸದ್ಯ ಭಾರೀ ಕುತೂಹಲ ಕೆರಳಿಸಿದ್ದು, ಈ ಚಿತ್ರದ ವಿಶೇಷ ಪಾತ್ರವೊಂದಕ್ಕೆ ಬೇಬಿ ಸಾರಾ ಎಂಟ್ರಿ ಕೊಟ್ಟಿರುವುದು ಇದೀಗ ಸಿನಿಪ್ರೀಯರಿಗೆ ಮತ್ತಷ್ಟು ಸಂತಸ ತಂದಿದೆ.

    ಇದನ್ನೂ ಓದಿ: VIDEO | ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಮಗುವಿಗೆ ಒದ್ದ ಪೊಲೀಸ್; ಕಾನ್ಸ್‌ಟೇಬಲ್‌ ಅಮಾನತು

    ಸೈಲೇಶ್ ಕೋಲನು ನಿರ್ದೇಶನದಲ್ಲಿ ಮೂಡಿಬಂದಿರುವ ‘ಸೈಂಧವ್’​ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ರುಹಾರಿ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಸಿನಿಮಾ ಸದ್ಯ ನಿರ್ಮಾಣ ಹಂತದಲ್ಲಿದೆ. ಈ ಚಿತ್ರ ಡಿಸೆಂಬರ್ 22, 2023 ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಮಧ್ಯೆ ಪ್ಯಾನ್ ಇಂಡಿಯಾ ಚಿತ್ರದ ತಯಾರಕರು ಅಧಿಕೃತ ಸುದ್ದಿಯೊಂದನ್ನು ಪ್ರಕಟಿಸಿದ್ದು, ಚಿತ್ರದಲ್ಲಿನ ಗಾಯತ್ರಿ ಪಾತ್ರವನ್ನು ಬೇಬಿ ಸಾರಾ ನಟಿಸಲಿದ್ದಾರೆ ಎಂದು ದೃಢಪಡಿಸಿದೆ.

    ವಿಕ್ಟರಿ ವೆಂಕಟೇಶ್ ಅವರೊಟ್ಟಿಗೆ ಬೇಬಿ ಸಾರಾ ಇರುವ ಪೋಸ್ಟರ್​ ಇದೀಗ ಅಭಿಮಾನಿಗಳ ಗಮನಸೆಳೆದಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೈಂಧವ್ ಚಿತ್ರದಲ್ಲಿ ಆಂಡ್ರಿಯಾ ಜೆರೆಮಿಯಾ, ಶ್ರದ್ಧಾ ಶ್ರೀನಾಥ್, ನವಾಜುದ್ದೀನ್ ಸಿದ್ದಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆಗಳು ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಚಿತ್ರ ಯಾವ ರೀತಿ ಸದ್ದು ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).

    ಜುಲೈ 18 ರಂದು ನಡೆಯಲಿರುವ ಬೆಂಗಳೂರು ವಿರೋಧ ಪಕ್ಷದ ಸಭೆಗೆ ಶರದ್ ಪವಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts