More

    ಜುಲೈ 18 ರಂದು ನಡೆಯಲಿರುವ ಬೆಂಗಳೂರು ವಿರೋಧ ಪಕ್ಷದ ಸಭೆಗೆ ಶರದ್ ಪವಾರ್

    ಬೆಂಗಳೂರು: ವಿಧಾನಸಭೆ ಅಧಿವೇಶನ ಮಾತ್ರವಲ್ಲದೆ ವಿಪಕ್ಷಗಳ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಿಂದ ಪ್ರಮುಖ ನಾಯಕರು ರಾಜ್ಯ ರಾಜಧಾನಿ ಆಗಮಿಸುತ್ತಿದ್ದು, ಈ ಪೈಕಿ ಮಹಾರಾಷ್ಟ್ರದ ಮಾಜಿ ಸಿಎಂ, ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​​ ಅವರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: VIDEO | ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಮಗುವಿಗೆ ಒದ್ದ ಪೊಲೀಸ್; ಕಾನ್ಸ್‌ಟೇಬಲ್‌ ಅಮಾನತು

    ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥರಾದ ಶರದ್​ ಪವಾರ್​​ ಜುಲೈ 18 ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ 24 ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೋಮವಾರದ ಔತಣಕೂಟವನ್ನು ತ್ಯಜಿಸಿ ನೇರವಾಗಿ ಮಂಗಳವಾರ ಬೆಂಗಳೂರಿನಲ್ಲಿ ನಡೆಯುಲಿರುವ ವಿರೋಧ ಪಕ್ಷಗಳ ನಡುವಿನ ಸಭೆಗೆ ಹಾಜರಾಗಲಿದ್ದು, ದಿನದ ಸಂಪೂರ್ಣ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ಪಿಎಸ್ ಐ ಪಿಸ್ತೂಲ್ ಕಿತ್ತುಕೊಂಡು ಪರಾರಿಯಾದ ಕುಖ್ಯಾತ ಅಂತಾರಾಜ್ಯ ಕಳ್ಳ : ಎಸ್ಪಿ ಇಶಾ ಪಂತ್ ನೇತೃತ್ವದಲ್ಲಿ ಪೊಲೀಸರ ಶೋಧ

    ಜುಲೈ 17 ಮತ್ತು 18 ರಂದು ನಡೆಯಲಿರುವ ಲೋಕಸಭೆಯ ವಿರೋಧ ಪಕ್ಷಗಳ ಗಣ್ಯರು ಬೆಂಗಳೂರಿನ ತಾಜ್​ವೆಸ್ಟ್ ಎಂಡ್​ ಹೋಟೆಲ್​ನಲ್ಲಿ ಸಭೆ ನಡೆಸಲಿದ್ದಾರೆ. ಈ ಕಾರಣದಿಂದ ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ ಸಂಚಾರ ತೊಡಕು ಉಂಟಾಗಲಿದ್ದು, ನಗರ ಪೊಲೀಸರು ಈಗಾಗಲೇ ಬದಲಿ ಮಾರ್ಗವನ್ನು ಅನುಸರಿಸಲು ಪ್ರಕಟಣೆಯನ್ನು ಕೂಡ ಹೊರಡಿಸಿದ್ದಾರೆ.

    ವಿವಿಐಪಿ ಸಂಚಾರದಿಂದಾಗಿ ನಗರದ ಮುಖ್ಯ ರಸ್ತೆಗಳಾದ ರಾಜಭವನ ರಸ್ತೆ, ಬಳ್ಳಾರಿ ರಸ್ತೆ, ಬಿ.ಆರ್‌.ಅಂಬೇಡ್ಕರ್ ರೋಡ್​​ ಮತ್ತು ರೇಸ್ ಕೋರ್ಸ್‌ ರೋಡ್​​ನಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).

    ಪವನ್ ಕಲ್ಯಾಣ್ ನಟನೆಯ ‘ಬ್ರೋ’ ಪ್ರಿ-ರಿಲೀಸ್ ಈವೆಂಟ್​​ ಯಾವಾಗ?; ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts