ಪಿಎಸ್ ಐ ಪಿಸ್ತೂಲ್ ಕಿತ್ತುಕೊಂಡು ಪರಾರಿಯಾದ ಕುಖ್ಯಾತ ಅಂತಾರಾಜ್ಯ ಕಳ್ಳ : ಎಸ್ಪಿ ಇಶಾ ಪಂತ್ ನೇತೃತ್ವದಲ್ಲಿ ಪೊಲೀಸರ ಶೋಧ

IMG-20230717-WA0008
Published on

ಕಲಬುರಗಿ : ಬಂಧಿಸಲು ಹೋಗಿದ್ದ ಪಿಎಸ್ಐ ಬಳಿಯಿದ್ದ ಸರ್ಕಾರಿ ಪಿಸ್ತೂಲ್ ಕುಖ್ಯಾತ ಅಂತಾರಾಜ್ಯ ಕಳ್ಳನೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ.

ಖಾಜಾ ಎಂಬಾತನೇ ಪೊಲೀಸರಿಗೆ ಯಾಮಾರಿಸಿದ ಕಳ್ಳ. ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದವ. ಬೆಂಗಳೂರಿನಲ್ಲಿ ಕಳ್ಲತನ ಮಾಡಿ ಬಳೂರಗಿಗೆ ಬರುತ್ತಿದ್ದಾನೆ ಎಂಬ‌ ಮಾಹಿತಿಯನ್ನು ಬೆಂಗಳೂರಿನ ‌ಪೊಲೀಸರು ಕಲಬುರಗಿ ಎಸ್ಪಿ ಇಶಾ ಪಂತ್ ಅವರಿಗೆ ನೀಡಿದ್ದರು. ಅದರಂತೆ ಅಫಜಲಪುರ ಪೊಲೀಸರಿಗೆ ಖಾನ್‌ನನ್ನು ಬಂಧಿಸಲು ಸೂಚಿದ್ದರು.

ಮೇಲಧಿಕಾರಿಗಳ ಸೂಚನೆಯಂತೆ
ಅಫಜಲಪುರ ಪಿಎಸ್ ಐ ಭೀಮರಾಯ ಬಂಕಲಗಿ ಮತ್ತು ಸಿಬ್ಬಂದಿ ಬಂಧಿಸಲು ಕಾರ್ಯಚರಣೆ ಶುರುವಿಟ್ಡರು.

ಅಫಜಲಪುರಕ್ಕೆ ಆತ ಬಂದ ಮಾಹಿತಿಯಂತೆ ಪೊಲೀಸರು ಬಂಧಿಸಲು ಹೋಗಿದ್ದಾಗ ಪಿಎಸ್ ಐ ಬಳಿಯಿದ್ದ ಸರ್ವಿಸ್ ರಿವಾಲ್ವಾರ್ ಕಸಿದುಕೊಂಡು ಬೆದರಿಸಿ ಪರಾರಿಯಾಗಿದ್ದಾನೆ.

ಖಾಜಾನ ವಿರುದ್ದ ಬೆಂಗಳೂರು ಅಫಜಲಪುರ ,ಕಲಬುರಗಿ , ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣ ದಾಖಲಾಗಿವೆ.

ಸರ್ವಿಸ್ ರಿವಾಲ್ವರ ಕಸಿದುಕೊಂಡ ಪರಾರಿಯಾದ ಪೊಲೀಸರು ಪತ್ತೆ ಕೆಲಸಕ್ಕೆ ಇಳಿದರು. ಬೆನ್ನಲ್ಲೆ ಎಸ್ ಪಿ ಇಶಾ ಪಂತ್ ಅವರು ಸ್ಥಳಕ್ಕೆ ದೌಡಾಯಿಸಿದರು. ಬಳ್ಳೂರಗಿ ಸುತ್ತಲೂ ಖಾಜಾನಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net