ಮೋದಿಯ ಫೋಟೋ ಹರಿದ ಕಾಂಗ್ರೆಸ್ ಶಾಸಕ; ದಂಡ ವಿಧಿಸಿದ ನ್ಯಾಯಾಲಯ

ಮೋದಿಯ ಫೋಟೋ ಹರಿದ ಕಾಂಗ್ರೆಸ್ ಶಾಸಕ; ದಂಡ ವಿಧಿಸಿದ ನ್ಯಾಯಾಲಯ
Published on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಭಾವಚಿತ್ರ ಹರಿದ ಕಾಂಗ್ರೆಸ್ ಶಾಸಕನಿಗೆ ನ್ಯಾಯಾಲಯ ದಂಡ ವಿಧಿಸಿದೆ.

2017ರಲ್ಲಿ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್ ಪ್ರಧಾನಿ ಮೋದಿಯ ಭಾವಚಿತ್ರ ಹರಿದಿದ್ದು, ಗುಜರಾತ್ ನವಸಾರಿ ನ್ಯಾಯಾಲಯವು 99 ರೂಪಾಯಿ ದಂಡ ವಿಧಿಸಿದೆ.

ಅನಂತ್ ಪಟೇಲ್ ಮತ್ತು ಇತರರು ನವಸಾರಿ ಕೃಷಿ ವಿಶ್ವವಿದ್ಯಾಲುದ ಕುಲಪತಿ ಕಚೇರಿಗೆ ನುಗ್ಗಿ ಅಶಿಸ್ತು ತೋರಿದ್ದರು. ಜತೆಗೆ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ವಿಸಿ ಮೇಜಿನ ಮೇಲಿದ್ದ ಪ್ರಧಾನಿ ಮೋದಿಯ ಫೋಟೋ ಹರಿದು ಹಾಕಿದ್ದರು ಎನ್ನುವ ಆರೋಪವಿದೆ.

ಕ್ರಿಮಿನಲ್ ಪ್ರಕರಣಕ್ಕಾಗಿ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯವು ಘೋಷಿಸಿದೆ. 99 ರೂ. ದಂಡವನ್ನುಪಾವತಿ ಮಾಡಲು ಆದೇಶಿಸಿದೆ. ತಪ್ಪಿದಲ್ಲಿ ಅವರು ಏಳು ದಿನಗಳ ಸಾದಾ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net