ಹುಟ್ಟುಹಬ್ಬದ ಪಾರ್ಟಿ ಮಾಡಲು ಹೋದ ಯುವಕ ಶವವಾಗಿ ಪತ್ತೆ!

Odisha Youth Hangs Himself After Birthday Celebration in OYO Hotel Room
Published on

ಒಡಿಶಾ: ಹುಟ್ಟುಹಬ್ಬದ ಪಾರ್ಟಿ ಮಾಡಲು ಹೋದ ಯುವಕ ಖಂಡಗಿರಿಯ ಓಯೋ ಹೋಟೆಲ್​ನ ರೂಮ್​​ವೊಂದರಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ದುರ್ಗಾ ಪ್ರಸಾದ್ ಮಿಶ್ರಾ ಮೃತ ಯುವಕ, ಈತ ಕಟಕ್ ಜಿಲ್ಲೆಯ ನಿಯಾಲಿ ನಿವಾಸಿಯಾಗಿದ್ದಾನೆ. ಹುಟ್ಟುಹಬ್ಬದ ಆಚರಣೆಗೆಂದು ಓಯೋ ಹೋಟೆಲ್‌ಗೆ ಹೋದವನು ಶವವಾಗಿ ಪತ್ತೆಯಾಗಿದ್ದಾನೆ.

ಈ ಯುವಕ ತನ್ನ ಸ್ನೇಹಿತೆ ವಾಶ್‌ರೂಂನಲ್ಲಿದ್ದ ವೇಳೆ ಆಕೆಯ ದುಪಟ್ಟಾ ಬಳಸಿಕೊಂಡು ನೇಣು ಬಿಗಿದುಕೊಂಡಿದ್ದು, ಈತನ ಶವವು ಸ್ನೇಹಿತರಿಗೆ ಬೆಳಿಗ್ಗೆ ಪತ್ತೆಯಾಗಿದೆ. ಘಟನೆಯ ಮಾಹಿತಿ ಸಿಗುತ್ತಲೇ ಸ್ಥಳಕ್ಕೆ ಭೇಟಿ ಕೊಟ್ಟ ಖಾಂದಗಿರಿ ಪೊಲೀಸ್ ಠಾಣಾ ಸಿಬ್ಬಂದಿ ಮೃತ ಯುವಕನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದಾರೆ. ಯುವಕನ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಸಾವಿನ ಕಾರಣ ಪತ್ತೆ ಮಾಡಲು ತನಿಖೆ ನಡೆಸುತ್ತಿದ್ದಾರೆ.

ದುರ್ಗಾ ತನ್ನ ಗೆಳತಿ ಹಾಗೂ ಇನ್ನಿಬ್ಬರು ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಪಾರ್ಟಿಗೆಂದು ರೂಂ ಬುಕ್ ಮಾಡಿದ್ದ. ಹುಟ್ಟುಹಬ್ಬದ ಪಾರ್ಟಿಗೆ ಕರೆದು ದುರ್ಗಾನನ್ನು ಅಲ್ಲಿಯೇ ಕೊಲ್ಲುವ ಸಂಚನ್ನು ಆತನ ಸ್ನೇಹಿತರು ಮಾಡಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net