ಆತಿಥಿ ಶಿಕ್ಷಕರ ಸೇವಾ ಹಿರಿತನ ಪರಿಗಣಿಸಲಿ

Untitled design(4)
ಹರಪನಹಳ್ಳಿಯಲ್ಲಿ ಶಾಸಕಿ ಎಂ.ಪಿ.ಲತಾಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಮನವಿ ಸಲ್ಲಿಸಿತು. ಸಂಘದ ತಾಲೂಕು ಅಧ್ಯಕ್ಷ ರಾಜು ಕಡತಿ, ಕಾರ್ಯದರ್ಶಿ ನಂದೀಶ ಆಚಾರಿ, ಪದಾಧಿಕಾರಿಗಳಾದ ಕೆ.ಎಂ.ಕೇದರಸ್ವಾಮಿ, ಮಂಜಪ್ಪ, ಸಂತೋಷ, ಕವಿತಾ, ಗೀತಾ, ಉಮಾ, ಕೆ.ಶಿವಣ್ಣ, ಇದ್ದರು.
Published on

ಹರಪನಹಳ್ಳಿ: ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಲು ಒತ್ತಾಯಿಸಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಪಟ್ಟಣದಲ್ಲಿ ಶಾಸಕಿ ಎಂ.ಪಿ.ಲತಾಗೆ ಬುಧವಾರ ಮನವಿ ಸಲ್ಲಿಸಿತು.

ಸರ್ಕಾರಗಳು ಬೇಡಿಕೆ ಈಡೇರಿಸಲು ಮನಸ್ಸು ಮಾಡುತ್ತಿಲ್ಲ

ರಾಜ್ಯದಲ್ಲಿ ಸುಮಾರು 33 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳನ್ನು ಈಡೇರೆಸಲು ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಶಿಕ್ಷಕರ ಬದುಕಿಗೆ ಅಭದ್ರತೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆರಿಟ್ ಪದ್ಧತಿಯನ್ನು ತೆಗೆದು ಹಾಕಿ

ಅತಿಥಿ ಶಿಕ್ಷಕರಿಗೆ ಸೇವಾ ಹಿರಿತನ ಆಧಾರದ ಮೇಲೆ ಪರಿಗಣಿಸಬೇಕು. ಮೆರಿಟ್ ಪದ್ಧತಿಯನ್ನು ತೆಗೆದು ಹಾಕಬೇಕು. ಎಲ್ಲ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು. ಸರ್ಕಾರಿ ಶಿಕ್ಷಕರಂತೆ ಅತಿಥಿ ಶಿಕ್ಷಕಕರಿಗೆ ಸಹ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆಯಲ್ಲಿ ವೇತನ ನೀಡಬೇಕು. ಶೈಕ್ಷಣಿಕ ವರ್ಷದಲ್ಲಿ ವೇತನ ಹೆಚ್ಚಿಸಿ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದು ಹಾಕಿ ಗೌರವ ಶಿಕ್ಷಕ ಎಂದು ನಮೂದಿಸಬೇಕು. ನೇಮಕಾತಿಯಲ್ಲಿ 5% ಕೃಪಾಂಕ ನೀಡಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ನಾಗರಾಜ ಆಚಾರಿ, ಗೋಪಿನಾಯ್ಕ, ಸತೀಶ್, ಅಹ್ಮದ್, ನಾಗಲಿಂಗಪ್ಪ, ಅಂಜಿನಪ್ಪ, ವಿನಯಕುಮಾರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net