

ಮುಂಬೈ: ಪ್ರತಿಯೊಬ್ಬರ ಬಾಲ್ಯದ ಫೋಟೋ (Childhood Photo) ನೋಡಲು ಬಹಳ ಮುದ್ದು ಮುದ್ದಾಗಿ, ಚೆಂದವಾಗಿರುತ್ತದೆ. ಅದಕ್ಕೆ ಕಾರಣ, ಆ ಮುಗ್ಧತೆ, ತುಂಟತನ. ಹೆತ್ತವರು ತಮ್ಮ ಮಕ್ಕಳ ಮುದ್ದಾದ ಬಾಲ್ಯದ ಕ್ಷಣಗಳನ್ನು ಕೇವಲ ಕಣ್ಣಿನಲ್ಲಿ ಕಟ್ಟಿಕೊಳ್ಳದೆ, ಫೋಟೋ ತೆಗೆಸಿ, ಮಕ್ಕಳು ಬೆಳೆದು, ದೊಡ್ಡವರಾದ ಮೇಲೆ ತೋರಿಸುತ್ತಾರೆ. ನೋಡಿ ನೀವೆಲ್ಲ ಬಾಲ್ಯದಲ್ಲಿ ಹೇಗಿದ್ದೀರಿ? ಎಷ್ಟು ತುಂಟಾಟ ಮಾಡಿದ್ದೀರಾ ಎಂದು ಹೇಳುತ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಇಂತಹ ಛಾಯಚಿತ್ರಗಳನ್ನು ನೋಡಿ ಖುಷಿಪಡುವ ಜನರು, ಇಂದಿನ ಡಿಜಿಟಲ್ ಯುಗದಲ್ಲಿ ಆ ಫೋಟೋಗಳನ್ನು ತಮ್ಮ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡು, ತಮ್ಮ ಸ್ನೇಹಿತರಿಗೆ ನಾವು ಹೇಗಿದ್ದೆವು ನೋಡಿ ಎಂದು ತಿಳಿಸುತ್ತಾರೆ. ಸದ್ಯ ಇದೇ ರೀತಿ ಸ್ಟಾರ್ ನಟಿ (Actress) ಕೂಡ ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳು ಇದು ನೀವೇನಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಪಾಂಗಾಳ ಬಾಬು ಕೊರಗ
ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಹುಮತಗಳಿಂದ ಗೆದ್ದು ಬೀಗಿದ ಬಾಲಿವುಡ್ನ ಸ್ಟಾರ್ ನಟಿ ಕಂಗನಾ ರಣಾವತ್, ಕೇವಲ ಹೀರೋಯಿನ್ ಆಗಿ ಮಿಂಚದೆ ಇದೀಗ ರಾಜಕೀಯ ಅಖಾಡಕ್ಕೂ ಎಂಟ್ರಿ ಕೊಟ್ಟಿರುವುದು ಅನೇಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸಿನಿಮಾದಲ್ಲಿ ನಟಿಯಾಗಿ ನೋಡಿರುವ ಜನರು, ಒಬ್ಬ ಸಂಸದೆಯಾಗಿ ಕಂಗನಾ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬುದನ್ನು ತಿಳಿಯಲು ಎದುರುನೋಡುತ್ತಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋ ಹಂಚಿಕೊಂಡಿರುವ ಕಂಗನಾ, ಸಖತ್ ಸ್ಟೈಲಿಶ್ ಆಗಿ ಹಾಗೂ ಮುದ್ದಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಅಕ್ಟೋಬರ್ 09ರಂದು ತಮ್ಮ ಸಹೋದರನ ಜನ್ಮದಿನದಂದು ತೆಗೆಸಿಕೊಂಡ ಫೋಟೋವನ್ನು ಇಂದು ಪೋಸ್ಟ್ ಮಾಡಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಬಾಲ್ಯ ದಿನಗಳ ಛಾಯಾಚಿತ್ರಗಳನ್ನು ಒಮ್ಮೆ ನೋಡಿದಾಗ ಮುಖದಲ್ಲಿ ಮಂದಹಾಸವೇ ಮೂಡುತ್ತದೆ. ಚಿಕ್ಕವಯಸ್ಸಿನಿಂದಲೂ ನಾನು ಫೋಟೋ ಪ್ರಿಯೆ. ಕ್ಯಾಮರಾ ಮುಂದೆ ಇದ್ದರೆ ಸಾಕು ಪೋಸ್ ಕೊಡಲು ಓಡೋಡಿ ಬರುತ್ತಿದೆ ಎಂದು ತಮ್ಮ ಬಾಲ್ಯದ ಖುಷಿ ಕ್ಷಣವನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).