ಪಾರ್ಕಿಂಗ್​​​ ಮಾಡುವಾಗ ಎಚ್ಚರ! 14 ತಿಂಗಳ ಮಗುವಿನ ಮೇಲೆ ಹರಿದ ಕಾರು; ಮಗು ಸಾವು!

baby
Published on

ಅಹಮದಾಬಾದ್: ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಆಟ ಆಡುತ್ತಿದ್ದ 14 ತಿಂಗಳ ಮಗುವಿನ ಮೇಲೆ ಕಾರು ಹರಿದು ಮೃತಪಟ್ಟಿರುವ ಘಟನೆ ಶುಕ್ರವಾರ ಅಹಮದಾಬಾದ್​​ನ ನೆಹರುನಗರದದಲ್ಲಿ ನಡೆದಿದೆ.

ನೆಹರುನಗರದ ಕಲಾನಿಕೇತನ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ನಿರ್ವಹಿಸುವ ಮಹಾಬೀರ್ ಖಿಲ್ಲೋಹರ್ ಅವರ 14 ತಿಂಗಳ ಬಾಲಕಿ ಪಾರ್ಕಿಂಗ್ ಸ್ಥಳದಲ್ಲಿ ಆಟ ಆಡುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿ ಕಾರೊಂದು ಬಂದು ನಿಂತಿದೆ. ಪುಟ್ಟ ಮಗು ಆಟ ಆಡುತ್ತಾ ಮೆಲ್ಲನೆ ನಿಂತು ಕಾರಿನ ಎಡ ಚಕ್ರದ ಬಳಿ ಬಂದಿದೆ. ಈ ವೇಳೆ ಕಾರು ಮುಂದಕ್ಕೆ ಚಲಿಸಿದ್ದು ಮಗು ಕಾರಿನ ಚಕ್ರದ ಕೆಳಗಡೆ ಸಿಲುಕಿಕೊಂಡಿದೆ. ಈ ಭೀಕರ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಕಾರಿನ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾರಿಮಧ್ಯೆಯೆ ಮಗು ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಕಾರು ಚಾಲಕ ಲಿಡಿಯಾ ವಿರುದ್ಧ ಐಪಿಸಿ 279, 304A ಮತ್ತು 337 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು. ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ಎಂ ಡಿವಿಷನ್ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಯುಬಿ ಧಖಾಡ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net