ರಿಂಕು, ಗಿಲ್​ ಔಟ್‌, ರಿಯಾನ್​ ಪರಾಗ್​ ಇನ್​: ಟಿ20 ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಕಟ್ಟಿದ ಮೊಹಮ್ಮದ್​ ಕೈಫ್​!

t20 squde
Published on

ನವದೆಹಲಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 17ನೇ ಆವೃತ್ತಿಯ ಅಂತ್ಯದ ಬೆನ್ನಲ್ಲೇ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದೆ. ಜೂನ್ 1 ರಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಕದನಕ್ಕಾಗಿ ಎಲ್ಲಾ ತಂಡಗಳು ಮೇ 1 ರೊಳಗೆ ತಮ್ಮ ತಂಡಗಳನ್ನು ಪ್ರಕಟಿಸಬೇಕಿದೆ.

ಐಪಿಎಲ್‌ 2024 ಟೂರ್ನಿಯಲ್ಲಿ ಆಟಗಾರರು ನೀಡುವ ಪ್ರದರ್ಶನದ ಮೇಲೆ ಬಿಸಿಸಿಐ ಸೆಲೆಕ್ಟರ್ಸ್‌ ಹದ್ದಿನ ಕಣ್ಣಿಟ್ಟಿದ್ದಾರೆ. ಅದಾಗಿಯೂ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್​ ತಂಡ ಚುಟುಕು ಸಮರಕ್ಕೆ ಬಲಿಷ್ಠ ತಂಡವನ್ನು ತಿಳಿಸಿದ್ದಾರೆ.

ಮುಂಬರುವ ಟಿ20 ವಿಶ್ವಕಪ್​ಗಾಗಿ ಕೈಫ್ 15 ಸದಸ್ಯರ ಬಲಿಷ್ಠ ಬಳಗವನ್ನು ಆಯ್ಕೆ ಮಾಡಿದ್ದಾರೆ. ಗಮನಾರ್ಹ ವಿಷಯವೇನೆಂದರೆ ಈ ತಂಡದಲ್ಲಿ ರಿಂಕು ಸಿಂಗ್, ಸಂಜು ಸ್ಯಾಮ್ಸನ್ ಹಾಗೂ ಶುಭ್​ಮನ್ ಗಿಲ್ ಅವರಿಗೆ ಸ್ಥಾನ ಕೊಟ್ಟಿಲ್ಲ ಎಂಬುದು ಎಲ್ಲರಲ್ಲೂ ಆಶ್ಚರ್ಯ ತಂದಿದೆ. ಇವರ ಬದಲಿಗೆ ಶಿವಂ ದುಬೆ ಹಾಗೂ ದೇಶಿ ಕ್ರಿಕೆಟ್​ ಹಾಗೂ ಪ್ರಸಕ್ತ ಐಪಿಎಲ್​ನಲ್ಲಿ ಮಿಂಚುತ್ತಿರುವ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡಿದ್ದಾರೆ.

ಸ್ಪಿನ್ನರ್​ಗಳಾಗಿ ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್​ಗೆ ಸ್ಥಾನ ನೀಡಿದ್ದಾರೆ. ವೇಗಿಗಳ ಪಟ್ಟಿಯಲ್ಲಿ ಜಸ್​ಪ್ರೀತ್ ಬುಮ್ರಾ ಜೊತೆ ಮೊಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಸಿಂಗ್​ ಅವರು ಕೈಫ್​ ತಂಡದಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ ರಿಷಭ್ ಪಂತ್​ಗೆ ಸ್ಥಾನ ನೀಡಿದ್ದಾರೆ.

ಟಿ20 ವಿಶ್ವಕಪ್‌ಗೆ ಮೊಹಮ್ಮದ್​ ಕೈಫ್‌ ತಂಡ 

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್, ರಿಯಾನ್ ಪರಾಗ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net