More

    ಲೋಕಸಮರಕ್ಕೆ ‘ಮೋದಿ ಗ್ಯಾರಂಟಿ​’ ಅಸ್ತ್ರ: ದೇಶದಲ್ಲಿ ಮೂರು ಹೊಸ ಬುಲೆಟ್​ ಟ್ರೈನ್​ ಯೋಜನೆ ಜಾರಿ!

    ನವದೆಹಲಿ: ಮುಂದಿನ ದಿನಗಳಲ್ಲಿ ಭಾರತದಲ್ಲಿ ಮೂರು ಬುಲೆಟ್​ ಟ್ರೈನ್​ಗಳನ್ನು ಜಾರಿಗೊಳಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದರು.

    ಇದನ್ನೂ ಓದಿ: ರಿಂಕು, ಗಿಲ್​ ಔಟ್‌, ರಿಯಾನ್​ ಪರಾಗ್​ ಇನ್​: ಟಿ20 ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಕಟ್ಟಿದ ಮೊಹಮ್ಮದ್​ ಕೈಫ್​!

    ಭಾನುವಾರ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾನಾಡಿದ ಮೋದಿ ಅವರು. ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಕ್ಕೆ ಹೊಸ ಮೂರು ಬುಲೆಟ್​ ಟ್ರೈನ್​ ನೀಡುವುದಾಗಿ ತಿಳಿಸಿದ್ದಾರೆ.

    ಲೋಕಸಮರಕ್ಕೆ 'ಮೋದಿ ಗ್ಯಾರಂಟಿ​’ ಅಸ್ತ್ರ: ದೇಶದಲ್ಲಿ ಮೂರು ಹೊಸ ಬುಲೆಟ್​ ಟ್ರೈನ್​ ಯೋಜನೆ ಜಾರಿ!

    ಇಂದು ಅಹಮದಾಬಾದ್ ಮುಂಬೈ ಬುಲೆಟ್ ಟ್ರೈನ್ ಯೋಜನೆ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಬಹುತೇಕ ಮುಕ್ತಾಯ ಹಂತದಲ್ಲಿದೆ. ಅದೇ ರೀತಿಯಲ್ಲಿ, ಉತ್ತರ ಭಾರತದಲ್ಲಿ ಒಂದು ಬುಲೆಟ್ ರೈಲು, ದಕ್ಷಿಣ ಭಾರತದಲ್ಲಿ ಒಂದು ಬುಲೆಟ್ ರೈಲು ಮತ್ತು ಪೂರ್ವ ಭಾರತದಲ್ಲಿ ಒಂದು ಬುಲೆಟ್ ಟ್ರೈನ್ ಓಡಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದಕ್ಕಾಗಿ ಸಮೀಕ್ಷಾ ಕಾರ್ಯವೂ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಬಿಜೆಪಿಯ ಸಂಕಲ್ಪ ಅನಾವರಣಗೊಳಿಸಿದ ಬಳಿಕ ಪ್ರಧಾನಿ ಮೋದಿ ಅವರು ಹೇಳಿದರು.

    ದೇಶದ ಮೂಲೆ ಮೂಲೆಗೆ ವಂದೇ ಭಾರತ್ ರೈಲುಗಳನ್ನು ವಿಸ್ತರಿಸುವ ಗುರಿ ಹೊಂದಿರುವುದಾಗಿ ಹೇಳಿದ ಮೋದಿ ಅವರು, ವಂದೇ ಭಾರತ್‌ನ ಮೂರು ಮಾದರಿಯ ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್‌ಕಾರ್ ಮತ್ತು ವಂದೇ ಭಾರತ್ ಮೆಟ್ರೋ ರೈಲುಗಳು ದೇಶಾದ್ಯಂತ ಓಡಾಡಲಿವೆ ಎಂದು ಮೋದಿ ಹೇಳಿದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್​ ನೇತೃತ್ವದ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ ಅವರು, ಭ್ರಷ್ಟರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಭರವಸೆ ನೀಡಿದರು. ದೇಶದ ಬಡವರು ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಬಡವರನ್ನು ಲೂಟಿ ಮಾಡಿದವರು ಜೈಲಿಗೆ ಹೋಗುತ್ತಿದ್ದಾರೆ. ಭ್ರಷ್ಟರ ವಿರುದ್ಧ ಇಂತಹ ಕಠಿಣ ಕ್ರಮ ಮುಂದುವರಿಯುತ್ತದೆ. ಇದು ಮೋದಿ ಅವರ ಗ್ಯಾರಂಟಿ. ದೇಶದ ಹಿತಾಸಕ್ತಿಯಿಂದ ಬಿಜೆಪಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ. ನಮಗೆ ಪಕ್ಷಕ್ಕಿಂತ ದೇಶದ ಅಭಿವೃದ್ಧಿ ಮುಖ್ಯವಾಗಿರುತ್ತದೆ ಎಂದು ಮೋದಿ ಹೇಳಿದರು.

    ಉತ್ತರಪ್ರದೇಶ: 50 ರೂ. ಕೊಡುವಂತೆ ಕೇಳಿದ್ದಕ್ಕೆ ಬಟ್ಟೆ ಮಾಲೀಕನ ಬೆರಳು ಕಚ್ಚಿ ವ್ಯಕ್ತಿ ಪರಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts