ಗ್ಯಾರಂಟಿ‌ ಎಂದೇಳುವ ರಾಜ್ಯ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ

WhatsApp Image 2024-03-23 at 6.44.09 PM
Published on

ಹುಬ್ಬಳ್ಳಿ: ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದಲ್ಲಿ ಯಾವುದು ಸರಿಯಿಲ್ಲ. ಈ ಸರ್ಕಾರಕ್ಕೆ ಗ್ಯಾರಂಟಿ‌ಯೇ ಇಲ್ಲ ಎಂದರು.

ಡಿ.ಕೆ. ಶಿವಕುಮಾರ್​ ಹಾಗೂ ಸಿದ್ಧರಾಮಯ್ಯ ಕಚ್ಚಾಡುತ್ತಿದ್ದಾರೆ. ಹೆಚ್ಚಿನ‌ ಡಿಸಿಎಂಗಳನ್ನು ಮಾಡಿ‌ ಡಿ.ಕೆ.ಶಿ ಅನ್ನು ಮೂಲೆಗುಂಪು ಮಾಡುವ ತಂತ್ರ ನಡೆದಿದೆ. ಕಾನುನಾತ್ಮಕವಾಗಿಯೂ ಡಿ.ಕೆ. ಶಿವಕುಮಾರ್​ಗೆ ತೊಂದರೆ ಕೊಡುವ ಪ್ಲಾನ್ ಮಾಡಲಾಗಿದೆ.ಅದರಲ್ಲಿ‌ ಸಫಲವಾಗದಿದ್ದರೂ ಪ್ಲಾನ್ ಮಾಡುತ್ತಲೇ ಇದ್ದಾರೆ ಎಂದರು.

ಗ್ಯಾರಂಟಿ‌ ಎಂದು ಹೇಳುವ ರಾಜ್ಯ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ ಎಂದರು. ಇನ್ನು ಮಂಡ್ಯ ಟಿಕೆಟ್ ಗೊಂದಲ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುಮಲತಾ ಅವರ ಜತೆ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ದಾರೆ. ಒಂದೆರಡು ದಿನಗಳಲ್ಲಿ‌ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ಕನಿಷ್ಠ 20 ಸ್ಥಾನ ಗೆಲ್ಲದಿದ್ದರೆ ಸಿಎಂ‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತೆ ಎಂಬ ಶಾಸಕ‌ ಎಸ್.ಆರ್ ಶ್ರೀನಿವಾಸ ಹೇಳಿಕೆಗೆ ಉತ್ತರಿಸಿದ ಪ್ರಲ್ಹಾದ್​ ಜೋಶಿ, 20 ಕ್ಷೇತ್ರ ಅಂತಾ ಯಾಕೆ ಹೇಳುತ್ತಿದ್ದಾರೋ‌ ಗೊತ್ತಿಲ್ಲ. ಐದಕ್ಕಿಂತ ಹೆಚ್ಚು ಗೆಲ್ಲಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ ಸಿದ್ಧರಾಮಯ್ಯ ರಾಜೀನಾಮೆ ಕೊಡಲೇಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net