ಮಂಗಗಳ ಚೇಷ್ಟೆಗೆ ಮಹಿಳೆ ಸೇರಿ ಐವರ ಪ್ರಾಣಪಕ್ಷಿ ಹಾರಿಹೋಯಿತು

wall collapse
Published on

ನವದೆಹಲಿ: ಮಂಗಗಳ ಗುಂಪಿನ ಚೇಷ್ಟೆ ನಾಲ್ವರು ಮಕ್ಕಳು ಸೇರಿ ಐವರ ಪ್ರಾಣಪಕ್ಷಿ ಹಾರಿಹೋಗಿದೆ. ಶಿಥಿಲಗೊಂಡಿದ್ದ ಗೋಡೆಯನ್ನು ಮಂಗಗಳ ಗುಂಪು ಜೋರಾಗಿ ಅಲುಗಾಡಿಸಿದ್ದರಿಂದ, ಅದು ಕುಸಿದು ಬಿದ್ದಿದ್ದು, ಅದರಡಿಯಲ್ಲಿ ಸಿಲುಕಿದ 45 ವರ್ಷದ ಮಹಿಳೆ ಹಾಗೂ ಆಕೆ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಶಹಜಹಾನ್​ಪುರದ ವಾಜೀಬ್​ ಖೇಲ್​ ಎಂಬ ಬಡಾವಣೆಯಲ್ಲಿ ಮನೆಯೊಂದರ ಗೋಡೆ ಶಿಥಿಲಗೊಂಡಿತ್ತು. ಇದು ತಿಳಿಯದೆ ಕೋತಿಗಳ ಗುಂಪು ಆ ಗೋಡೆಯ ಮೇಲಿ ಕುಳಿತು ಜೋರಾಗಿ ಅಲ್ಲಡಿಸಲು ಆರಂಭಿಸಿದ್ದವು. ದುರದೃಷ್ಟವಶಾತ್​ ಗೋಡೆ ಹಠಾತ್ತನೆ ಕುಸಿದು ಪಕ್ಕದ ಮನೆಯತ್ತ ಉರುಳಿತು. ಅದರ ಅವಶೇಷಗಳಡಿ ಸಿಲುಕಿಕೊಂಡ ಮಹಿಳೆ ಹಾಗೂ ಆಕೆಯ ನಾಲ್ವರು ಮಕ್ಕಳು ಸ್ಥಳದಲ್ಲೇ ಮತಪಟ್ಟರು ಎನ್ನಲಾಗಿದೆ.

ಮಹಿಳೆ ತನ್ನ ಆರು ಮಕ್ಕಳ ಸಹಿತ ಮನೆಯ ಹಜಾರದಲ್ಲಿ ಮಲಗಿಕೊಂಡಿದ್ದಳು. ಗೋಡೆ ಹಠಾತ್ತನೆ ಕುಸಿದಿದ್ದರಿಂದ ನಿದ್ದೆಯಲ್ಲಿದ್ದ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಆಕೆ ಮತ್ತು ನಾಲ್ಕು ಮಕ್ಕಳು ಮೃತಪಟ್ಟರೆ, ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ ಎಂದು ಶಹಜಹಾನ್​ಪುರದ ಹಿರಿಯ ಎಸ್​ಪಿ ಎಸ್​. ಆನಂದ್​ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಇಂದ್ರಾ ವಿಕ್ರಮ್​ ಸಿಂಗ್​ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೊಂದು ನಿಜಕ್ಕೂ ದುಃಖಕರ ಸಂಗತಿ. ಬದುಕುಳಿದಿರುವವರಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಂಡಿದ್ದೇವೆ. ಮೃತ ಕುಟುಂಬದ ಸದಸ್ಯರಿಗೆ 4 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಶೀಘ್ರದಲ್ಲೇ ಅದನ್ನು ಅವರಿಗೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net