ಹೌಸ್​ಫುಲ್​-4 ಬಾಲಿವುಡ್​ ಸಿನಿಮಾದ ಬಾಲಾ, ಬಾಲಾ... ಹಾಡಿಗೆ ಡೇವಿಡ್​ ವಾರ್ನರ್​ ಪುತ್ರಿಯರ ನರ್ತನ

david warner
Published on

ನವದೆಹಲಿ: ಬಾಲಿವುಡ್​ನ ಖ್ಯಾತ ನಟ ಅಕ್ಷಯ್​ ಕುಮಾರ್​ ನಟನೆಯ ಹೌಸ್​ಫುಲ್​-4 ಚಿತ್ರದ ಬಾಲಾ, ಬಾಲಾ... ಹಾಡು ಸೂಪರ್​ ಹಿಟ್​ ಆಗಿದೆ. ಈ ಹಾಡು ಸಣ್ಣ ಮಕ್ಕಳಾದಿಯಾಗಿ ಎಲ್ಲರಿಗೂ ಇಷ್ಟವಾಗುತ್ತಿದೆ. ಕೆಲವರು ಈ ಹಾಡಿಗೆ ಹೆಜ್ಜೆ ಹಾಕಿ ತಮ್ಮದೇ ಆದ ಶೈಲಿಯಲ್ಲಿ ನರ್ತಿಸಿ ನಲಿಯುತ್ತಿದ್ದಾರೆ.

ಇದೀಗ ಈ ಹಾಡು ಆಸ್ಟ್ರೇಲಿಯಾದ ಜನಪ್ರಿಯ ಆಟಗಾರ ಡೇವಿಡ್​ ವಾರ್ನರ್ ಅವರ ಪುತ್ರಿಯರನ್ನೂ ಸೆಳೆದಿದೆ. ಆದ್ದರಿಂದ ಅವರು ಈ ಹಾಡನ್ನು ಹಾಕಿಕೊಂಡು ಅಕ್ಷಯ್​ ಕುಮಾರ್​ ಶೈಲಿಯಲ್ಲೇ ನರ್ತಿಸಿ, ನಲಿಯುತ್ತಿದ್ದಾರೆ.

ತಮ್ಮ ಪುತ್ರಿಯರು ಈ ಹಾಡಿಗೆ ಹೆಜ್ಜೆ ಹಾಕುತ್ತಿರುವ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಿಕೊಂಡಿರುವ ವಾರ್ನರ್​, ಅದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ. ನಿಮ್ಮ ಪುತ್ರಿಯರು ಅವರದ್ದೇ ಆದ ಶೈಲಿಯಲ್ಲಿ ಬಾಲಾ ಡಾನ್ಸ್​ ಮಾಡುವಾಗ ಎಂಬ ಶೀರ್ಷಿಕೆಯನ್ನು ಇದಕ್ಕೆ ಕೊಟ್ಟಿದ್ದಾರೆ.

ಹೌಸ್​ಫುಲ್​-4 ಸಿನಿಮಾವನ್ನು ನಾಡಿಯಾಡ್​ವಾಲಾ ಗ್ರ್ಯಾಂಡ್​ಸನ್​ ನಿರ್ಮಿಸಿದ್ದು, ಫಾಕ್ಸ್​ ಸ್ಟಾರ್​ ಸ್ಟುಡಿಯೋಸ್​ ಇದರ ಸಹನಿರ್ಮಾಪಕರಾಗಿದ್ದಾರೆ. ಅಕ್ಷಯ್​ ಕುಮಾರ್​ ಅಲ್ಲದೆ, ರಿತೇಶ್​ ದೇಶ್​ಮುಖ್​, ಬಾಬಿ ಡಿಯೋಲ್​, ಕೃತಿ ಸನನ್​, ಪೂಜಾ ಹೆಗಡೆ, ಕೃತಿ ಖರಬಂದಾ ಮತ್ತು ಚುಂಕಿ ಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net