ಭಾರೀ ಮಳೆಯ ನಡುವೆಯೂ ದೋಣಿಯಲ್ಲಿ ಚಲಿಸಿ, ಮದುವೆ ಆದ ವರ! Flood

bihar-688c8983f0aba
Published on

Flood: ಭಾರೀ ಮಳೆಯಿಂದಾಗಿ ವರನೊಬ್ಬ ತನ್ನ ಮದುವೆ ಮೆರವಣಿಗೆ ಮಾಡಲು ಕಾರಿನ ಬದಲು ದೋಣಿಯನ್ನು ತೆಗೆದುಕೊಂಡು ಹೋದ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ.

ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗಂಗಾ ನದಿಯು ಸಂಪೂರ್ಣವಾಗಿ ತುಂಬಿ ಹರಿಯುತ್ತಿದ್ದು, ಅಂತಹ ಪರಿಸ್ಥಿತಿಯಲ್ಲಿ ಗ್ರಾಮದ ನಿವಾಸಿ ದೇವಮುನಿ ಕುಮಾರ್​ ತನ್ನ ಮದುವೆಗಾಗಿ ದೋಣಿಯಲ್ಲಿ 35 ಕಿ.ಮೀ ದೂರ ಪ್ರಯಾಣಿಸಿದ್ದಾರೆ. ಈ ವೇಳೆ ಮದುವೆಯ ದಿನಾಂಕವನ್ನು ಒಂದು ತಿಂಗಳ ಮುಂಚೆಯೇ ನಿಗದಿಪಡಿಸಲಾಗಿತ್ತು ಎಂದು ವರನ ತಂದೆ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.

ಬಿಹಾರ ಮತ್ತು ನೇಪಾಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಗಂಗಾ ಹಾಗೂ ಕೋಸಿ ನದಿಗಳ ಅಪಾಯಮಟ್ಟ ಮೀರಿ ಕೆಲವು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಅನೇಕ ಜಿಲ್ಲೆಗಳು ತಗ್ಗು ಪ್ರದೇಶವಾದರಿಂದ ನೀರು ನುಗ್ಗಲು ಪ್ರಾರಂಭಿಸಿದೆ.

ಮೆರವಣಿಗೆ ದೋಣಿ ಮೂಲಕ ಸಂಚಾರ

ಮದುವೆ ದಿನ ಹತ್ತಿರ ಬಂದಿದ್ದರೂ ಮಳೆ ನಿಲ್ಲದ ಕಾರಣ ಗ್ರಾಮವನ್ನು ಬಿಟ್ಟು ಹೋಗಲು ಬೇರೆ ದಾರಿಯಿಲ್ಲದೆ ಮದುವೆ ಮೆರವಣಿಗೆಯನ್ನು ದೋಣಿ ಮೂಲಕ ಕತಿಹಾರ್​ ಜಿಲ್ಲೆಯ ಮಣಿಹರಿಯಲ್ಲಿರುವ ಕಟಕೋಶ್​ ಗ್ರಾಮದ ನಿವಾಸಿ ರಾಮಚಂದ್ರ ಚೌಧರಿ ಮನೆಗೆ ಬಂದಿಳಿದಿದ್ದು, ಮದುವೆ ನಂತರ ವಧುವಿನೊಂದಿಗೆ ಅದೇ ದೋಣಿಯ ಮೂಲಕ ವಾಪಸ್ಸಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net